ಸೋಮವಾರ, ಏಪ್ರಿಲ್ 28, 2008

ಹಸಿವು ಮತ್ತು ಕಣ್ಣೀರಿನ ಸಂಭಂದ.

ಮೊನ್ನೆ ಮನೆಗೆ ಬಂದಾದ ಮೇಲೂ ಬರ್ತಿ ಕೆಲ್ಸ ಇತ್ತು. ಕೆಲ್ಸ ಮಾಡ್ತ ಮಾಡ್ತ, ರಾತ್ರೆ ಊಟ ಮಾಡಕ್ಕೆ ಮರ್ತು ಹೊತು. ಸುಮಾರು ಹನ್ನೊಂದು ಘಂಟೆ ಹೊತ್ತಿಗೆ ಏನೋ ಮರ್ತು ಹೊಯ್ದು ಹೇಳಿ ಗೊತಾತು. ಇನ್ನು ಸ್ವಲ್ಪ ಹೊತ್ತು ಕಳ್ದ್ ಮೇಲೆ ಊಟ ಮಾಡಕ್ಕೆ ಮರ್ತೊಯ್ದು ಹೇಳಿ ಅಂದಾಜಾತು. ನೊಡಿದ್ರೆ, fridge ನಲ್ಲಿ ಎಂತು ಇಲ್ಲೆ :( ಸರಿ, ಎಂಥಾರು ಆಗ್ಲಿ ಹೇಳಿ ಅನ್ನಕ್ಕಿಟ್ಟಿ. ಅವತ್ತು ಎಂಥಕೇನ ಗೊತ್ತಿಲ್ಲೆ, ಬರ್ತಿ ಹಸ್ವಾಗಿ ಹೊಗಿತ್ತು. ವಿಸ್ಯ ಗೊತಿದ? ಹಸ್ವಾದ್ರೆ ನಿದ್ದೆ ಬತಲೆ, ತಲೆ ಒಡ್ತಲ್ಲೆ, ಹೊಗ್ಲಿ ಸುಮ್ನೆ ಕುತ್ಕಳನ ಅಂದ್ರು ಆಗ್ತಲ್ಲೆ. ಅಯ್ಯೊ ರಾಮ! ಯಾರಿಗೂ ಬೇಡ ಆ ಕಥೆ. ಹಂಗೆ ಓಲೆ ಮೇಲೆ ಅನ್ನ ಕುದಿ ಬತ್ತಿದ್ದಂಗೆ ಹಸ್ವು ಇನ್ನು ಹೆಚ್ಚಾಗಕ್ಕೆ ಶುರು ಆತು.
ಈನ್ನೆರಡು ನಿಂಷಕ್ಕೆ ಅನ್ನ ಬೆಯ್ತು. ಎಂಗೆ ಹಸ್ವಾದಾಗ ತಲೆ ಓಡ್ತಲ್ಲೆ ಹೇಳಿ ಅನ್ಸಿದ್ದು ಬಿಸಿ ಬಿಸಿ ಅನ್ನ ನ ಹುಟ್ಟಗೆ ತಗಂಡು, ತಟ್ಟಿಗೆ ಹಾಕ್ಯಂಡು, ಪುಳಿಯೊಗ್ರೆ ಗೊಜ್ಜು ಸುರ್ಗಿ, ಕಲ್ಸನ ಅಂತ ಮುಟ್ಟಿದ್ರೆ, ಕೈ ಸುಟ್ಟೊಗಕ್ಕ? ಒಳ್ಳೆ ಕಥೆ ಆತಲ ಹೇಳ್ಕ್ಯೊತ, 'ಉಫ್! ಉಫ್!' ಉಬ್ಸ್ಕ್ಯೊತ, ಉಣ್ಣ ಹೊತ್ತಿಗೆ, ಕಣ್ಣಗೆಲ್ಲ ನೀರು :O
ಈ ಕಣ್ಣೀರು ಹಸ್ವು ತೀರಿದ್ದಕ್ಕೆ ಬರ್ತ ಇದ್ದಿದ್ದ, ಅಥ್ವ ಅಮ್ಮನ ನೆನಪ್ಸ್ಕೊಂಡು ಬಂದಿದ್ದ ಹೇಳಿ ಕೊನಿಗೂ ಗೊತ್ತೆ ಆಗಲ್ಲೆ :|

2 ಕಾಮೆಂಟ್‌ಗಳು:

Ashu ಹೇಳಿದರು...

ಚಂದ ಬರದ್ದೆ. ನೀನು ಹೇಳಿದ್ದು ಸರಿ ಕಣೋ , ಎನ್ನ ಜೀವನದ ಅರ್ದ ವರ್ಷ ಹೊಸ್ತೆಲಿ ಆತು. ಊಟ ಮಾಡಿ ಬಂದರೂ ಕೂಡ ಹಶು ಅವುತು. ಹಾಸ್ಟೆಲ್ ಊಟ ಕೆಲವೊಮ್ಮೆ ತಿಮ್ಬಲೇ ಅವುಥಿಲ್ಲೆ. ಕಮ್ಮಿ ತೆಗೊಂದರು ಅಕ್ಕು ಆದರೆ ವೇಸ್ಟ್ ಮಾದುಲಾಗ್ ಅಂಥ ಎನ್ನ ಫಿಲೆದ್ ವರ್ಕ್ ಎನ್ನಗೆ ಹೇಳ್ಲಿ ಕೊಡಿದ್ದು. ಒಂದು ಸಲ ಅನ್ನು ಕೆಲಸ ಮಾಡ್ತಾ ಇದ್ದ ಸಮಯ. ಒಂದು ವಾರ ಬರಿ ನೀರು ಮತ್ತೆ ಮಾರಿಗೊಲ್ದ್ ತಿಂದು ಎತ್ತೆ. ಆಗ ಅನ್ನು ಗ್ರೆಸಿದ್ದು ಯಾವತು ಊಟ ಬಿದುಲಾಗ.

Ganesha Lingadahalli ಹೇಳಿದರು...

ತುಂಬಳ್ಳೀಸ್.......... ಭಾಳಾ ಮಿಸ್ ಮಾಡ್ಕ್ಯತ್ತಾ ಇದ್ಯ ನಿನ್ನ....