ಸೋಮವಾರ, ಮೇ 26, 2008

ಯೆಮ್ಮನಾಡಗೆ ಅರಳಿದ ಕಮಲ

ಅಂತೂ ಇಂತು ಕರುನಾಡ ಚುನಾವಣೆ ಮುಗ್ದು, ಪಲಿತಾಂಶ ಎಲ್ಲರಿಗುವ ಗೊತಾಗಿ ಹೊತು. ಎಮ್ ಪಕ್ಕದ್ದೂರವ್ರೆ ಆದ ಯೆಡ್ಡ್ಯೂರಪ್ಪ ಮುಖ್ಯಮಂತ್ರಿ ಆಗೊದು ಖಚಿತ. ಬರಿ 3 ಜನರನ್ನ ಹೊರ್ಗಿಂದ ಎಳ್ಕಳಕ್ಕು. ಅದೂ ಗಟ್ಟಿಮಾಡಿದ್ವಡ. ಒಟ್ಟಾರೆ ಇನೈದು ವರ್ಷ ಎಮ್ ಕಂದಾಯೆಲ್ಲ ಸರಿ ಉಪ್ಯೋಗ ಆಗ್ತೇನ ಹೇಳಿ ಒಂಚೂರು ಆಸೆ. ವಿಚಾರೆಂತು ಕೇಳಿರೆ, ಎಮ್ ಜಾತ್ಯಾತೀತ ಭಾರತದ ಕೆಲವೊಂದು ದೂರದರ್ಶನ ಚಾನಲ್ಲೊರು ಜಾತಿವಾರು ಸಚಿವರ ಪಟ್ಟಿ ಬಿತ್ತರ್ಸ್ತ ಇದ್ವಡ :o ಇಷ್ಟೆಲ್ಲ ವರ್ಷ ಎಲ್ಲಾತ ಅಲ್ಲಿ ಬೆಳ್ದು, ಬೇರ್ಬೇರೆ ಊರಗೆ ಇದ್ದು, ಎಂಗೆ ಜಾತಿನೆ ಇಲ್ಲೆ ಅಂತ ಅಂದ್ಕಂಡು, ಹಂಗೆ ಬದ್ಕಣ ಹೇಳಿರು ಜನ ಬಿಡ್ತ್ವಲ್ಲೆ, ನೀ ಬ್ರಾಹ್ಮಣ, ನೀ ಹವ್ಯಕ ಅಂತ ನೆನ್ಪು ಮಾಡ್ಸನೆ ಇರ್ತ. ಯಾವತ್ತಿಗೆ ನಮ್ಮ ಸರ್ಕಾರಿ ಅರ್ಜಿಗಳಲ್ಲಿ ಜಾತಿ ಅನ್ನೊದು ತೆಗಿಯಕ್ಕೆ ಸಾದ್ಯನೊ ಗೊತ್ತಿಲ್ಲೆ. ವಾರ್ತಾ ಕೊಂಡಿಗಳನ್ನ ಒದಿರೆ ಯಾರೊ ಗುಜ್ಜಾರ್ ಹೇಳ ಜನ್ವಡ, ಅವ್ರ ಜಾತಿನ ಹಿಂದುಳಿದ ಜಾತಿ ಪಟ್ಟಿಗೆ ಸೆರ್ಸಕ್ಕು ಹೇಳಿ ಕಂಡಲ್ಲೆಲ್ಲ ಬೆಂಕಿ ಹಚ್ಚ್ತಾ ಇದ್ವಡ. ಹೌದು ತಗ, ತೀರ ಈ ತರ ಮಾಡೊರು ಹಿಂದುಳಿದ ಜನ ಅಂತ ಹೇಳ್ಲಕ್ಕು. ತೀರ ನಮ್ ದೇಶದಗೆ ಮಾತ್ರನೇನ, ನನ್ನ ಕೆಲ್ಸ ಬೇರೆಯೊರು ಮಾಡ್ಕೊಡಕ್ಕು, ಎನ್ ಕೈಲಿ ಹರಿತಲ್ಲೆ ಅಂತ ಹೇಳದು. ಹೇಳಕ್ಕೊದ್ರೆ ಮಹಾಭಾರತ ಆಗೊಗ್ತು, ಚಾಪೆ ಹಾಸಿ, ಕೈಲಿ ಲೋಟ ಹಿಡ್ಕಂಡು ಇನ್ನೊಂದಿನ ಮಾತಾಡಣ.

ಭಾಜಾಪ ನನಗೆ ಮೊದಲಿಂದ ಇಷ್ಟವಾದ ಪಕ್ಷ, ಈಗ ಅದಿಕಾರ ಸಿಕ್ಕಿದ್ದು, ಹೆಂಗೆ ಆಡಳಿತ ನೆಡ್ಸ್ತ ನೋಡಣ. ರಾಜ್ಯ ಭಾಜಾಪದ ಸರ್ವರಿಗೂ ಶುಭಾಶಯಗಳು.

ಭಾನುವಾರ, ಮೇ 18, 2008

ಮನದಾಸೆ ಹಕ್ಕಿಯಾಗಿ.. ಮುಗಿಲಲ್ಲಿ ತೇಲಿ ತೇಲಿ..


ಇಂದು ನನ್ನ ಕೆಲವು ಗೆಳೆಯರೊಡನೆ ಆಕಾಶನೆಗೆತ (ಬಹುಷಃ ಕನ್ನಡ ಶಭ್ದಬಂಡಾರದಲ್ಲಿ skydiving ಅನ್ನೊ ಪದ ಇಲ್ಲ ಅನಿಸುತ್ತೆ, ಈ ಕ್ರೀಡೆ ಬಹು ಇತ್ತಿಚಿನದು) ಕ್ಕೆ ಹೊಗಿದ್ದೆ. 13ಸಾವಿರ ಅಡಿ ಎತ್ತರದಿಂದ ನೆಗೆದಾಗ ಆಗುವ ಅನುಬವವನ್ನು ಹಂಚಿಕೊಳ್ಳೊದು ಬಹು ಕಷ್ಟ, ಅದನ್ನ ಸಾದಿಸಿಯೆ ತಿಳಿಯಬೇಕು.

ನಾನು ಮಾಡಿದ ನೆಗೆತದ ಬಗ್ಗೆ - About the jump

ಫೊಟೊಗಳು ಇಲ್ಲಿ - Photos here.

ಶನಿವಾರ, ಮೇ 17, 2008

Pangea Day and Hope

It was a great feeling after watching this 4hr long program. I couldn't watch it live, but watched it online later. This program changed a bit of my view points on lot of things. One of the good programs I have watched in a long time. I would recommend them to all :)

Full program online - ಸಂಪೂರ್ಣ ಕಾರ್ಯಕ್ರಮ

Videos - ಸಣ್ಣ ಚಲನಚಿತ್ರಗಳು

ಭಾನುವಾರ, ಮೇ 11, 2008

ತಪ್ಪಿ ಹೊಯಿತಲ್ಲ..

ಕಳಿದ ವರ್ಷ ಹಾಗು ಈ ವರ್ಷದಲ್ಲಿ ನನಗಾದ ದೊಡ್ಡ ಲುಕ್ಸಾನು ಅಂದ್ರೆ ಮದುವೆಗಳು. ಕಳೆದ ವರ್ಷ ವೆನೆಜುವೆಲ ದೇಶಕ್ಕೆ ಮೂರು ತಿಂಗಳು ಹೋದಾಗ ಅನೇಕ ಗೆಳೆಯರ/ನೆಂಟರ ಮದುವೆಗಳು ತಪ್ಪಿ ಹೋಗಿದ್ದವು. ಈ ವರ್ಷ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿದ್ದೆನೆ, ಊರಲ್ಲಿ ಬಹಳಷ್ಟು ಮದುವೆಗಳು ನೆಡೆಯುತ್ತಿದೆ. ಬಹುಷ: ಅಲ್ಲಿದ್ದರೆ ಕೆಲಸಕ್ಕೆ ರಜೆ ಹಾಕಿ ಬರಿ ಮದುವೆಮನೆಗಳನ್ನು ಸುತ್ತೊದೆ ಆಗಿಹೊಗ್ತಿತ್ತೆನೊ :)

ಇವತ್ತು (IST: May 11th, 2008), ಆ ಲೆಕ್ಕದಲ್ಲಿ ಬಹುದೊಡ್ಡ ನಷ್ಟ, ನನ್ನ ಪ್ರಾಥಮಿಕಶಾಲೆಯ ಗೆಳೆಯ ನಾಗರಾಜ, ಹಾಗು ನವೋದಯದಲ್ಲಿ ಪರಿಚಯವಾಗಿ ಜೀವದ ಗೆಳೆಯನಾದ ನಾಗೇಂದ್ರ ಬಟ್ಟನ ಮದುವೆ ನೆಡೆಯುತ್ತಿದೆ (ಬೇರೆ ಬೇರೆ ಹುಡುಗಿಯರ ಜೊತೆಗೆ). ನಾನು ಎರಡೂ ಮದುವೆಗಳನ್ನು ತಪ್ಪಿಸಿಕೊಳ್ಳುತಿದ್ದೆನೆ ಎಂಬ ಬೇಜಾರಿನಲ್ಲಿದ್ದೆನೆ.

I wish happy married life to all the friends, whose marriages I missed.

ಶುಕ್ರವಾರ, ಮೇ 9, 2008

ಕ್ಷಮಿಸಿ ಬಿಡಮ್ಮ

ಬಂಧನ(bonding)! ನಂಟು(relate)! ಈ ಎರಡು ಶಬ್ದಗಳಿಂದ ಕನ್ನಡದಲ್ಲಿ ಬಹುತೇಕ ಪದಗಳು ಹುಟ್ಟಿಕೊಂಡಿವೆ. ಏನೇನು ಶಬ್ದಗಳು ಇರಬಹುದು ಅಂತ ಯೊಚಿಸ್ತ ಹೋದೆ, ಸಂಭಂಧ, ಬಂದು, ಭಾಂದವ್ಯ, ನೆಂಟ,ನೆಂಟಸ್ತಿಕೆ, ಇತ್ಯಾದಿ, ಇತ್ಯಾದಿ. "ಹೌದು, ಯಾಕಪ್ಪ ಇವೆಲ್ಲ ನೆನ್ಪಾಯ್ತು ನಿಂಗೆ" ಅಂತ ನೀವು ಕೇಳ್ಬೋದು. ಈ ಪದಗಳ ಬಗ್ಗೆ ನಾನು ಸುಮಾರಷ್ಟೆ ಯೋಚ್ನೆ ಮಾಡ್ತಾ ಇರ್ತಿನಿ. "ಅಪ್ಪಿ, ತಲಿಗೆ ಹಚ್ಚಕಳ್ಳಡ" ಅಂತ ನಿಂಗ ಹೇಳ್ತಿ ಅಂತ ನಂಗೆ ಗೊತಿದು. ಅದ್ರು ನಾ ಯೆಂತಕ್ಕೆ ಈ ವಿಚಾರಗಳ ಬಗ್ಗೆ ಯೋಚ್ನೆ ಮಾಡ್ತ್ನಪ್ಪ ಅಂದ್ರೆ, ನನ್ನಲ್ಲಿ ಆ 'ಬಂದನ' ಅನ್ನ ಬಾವನೆ ಕಡ್ಮೆ. ನನ್ನ ಮಂತ್ರ ಅದು, 'life moves on', ಹಂಗಂತ, ನನ್ನ ನಂಟು ಎಲ್ಲಿದು ಅಂದ್ರೆ, ಹೇಳದು ಸುಮಾರಷ್ಟೆ ಕಷ್ಟ. ಹುಟ್ಟಿದ್ದು ಮಲೆನಾಡಮಡಿಲ ಹವ್ಯಕ ಒಟ್ಟುಸಂಸಾರದಲ್ಲಿ. ಹತ್ತು ವರ್ಷಗಳ ನಂತರ ನವೋದಯ ವಿದ್ಯಾಲಯದಲ್ಲಿ ಜೀವನ. ಅಲ್ಲಿ 7 ವರ್ಷಗಳು ಕಳೆದ ನಂತರ 4 ವರ್ಷಗಳು ಮೈಸೂರಿನಲ್ಲಿ ಕಂಪ್ಯೂಟರ್ ತಾಂತ್ರಿಕ ವಿದ್ಯಾಭ್ಯಾಸ. ನಂತರದಲ್ಲಿ, 4 ವರ್ಷಗಳು ನಮ್ಮ ಬೆಂಗಳೂರು ಮಹಾನಗರಿಯಲ್ಲಿ. ಒಟ್ಟಾರೆ ಯೆನ್ ಭಾಷೆ ಕುಲ್ಗೆಟ್ ಹೊಗೈತ್ರಿ. ಒಂದಾ ಮಾತ್ ಹೇಳ್ ಬೇಕಂದ್ರ, ನಾನೊಬ್ಬ ಕನ್ನಡಿಗ. ಹೆಂಗಂದ್ರೂ ಬೇರೆ ಭಾಷೆ ಬರಲ್ಲ, ಅದ್ರಲ್ಲೂ ಈ ಬಡ್ಡಿಮಗಂದು ಇಂಗ್ಳಿಶು, ಮಾತಾಡಕ್ಕೆ ಬತಲ್ಯಪ. ಬರೆಯಕ್ಕೆ 'spell checkers' ಇದ್ದ, ಅಡ್ಡಿಲ್ಲೆ. ಇಲ್ದೆ ಹೊಗಿದ್ರೆ, ಕಥ್ಯಾ? ಪುಣ್ಯ ಮಾರಾಯ, BE ಮಾಡಿದ್ದಿ ಬಚಾವು, ಪಾಸಾರು ಆದಿ, ಇಲ್ದೆ ಹೊಗಿದ್ರೆ, ಊರಗೆ ತೋಟ ನೋಡ್ಕ್ಯೋತ, ಕೊಟ್ಗೆಲಿ ಎಮ್ಮೆ ಮೈ ತೊಳ್ಸ್ಗ್ಯೊತ, ಇರಕಿತ್ತು. ಹಂಗಂತ, ಊರಗೆ ಅದನ್ನ ಮಾಡದು ತಪ್ಪಾ ಕೇಳಿರೆ ತಪ್ಪಲ್ಲ. ಯೆಂಗೆ ಮೈಗಳ್ತನ ಸಣ್ಣಕಿದ್ದಾಲಿಂದನೆ ಬಯಿಂದು. ಅದ್ಕೆ ಸುಮಾರೆ ಕಷ್ಟಾಗ್ತಿತ್ತು ಹೇಳಿ ವಿಚಾರ.

"ಇಷ್ಟೆ ವಿಚಾರಾಗಿದ್ರೆ ಇಲ್ಲಿ ಒದ್ದಾಡ್ಕೊತ ಬರ್ಯದು ಯೆಂತಿತ್ತು? ಮಳ್ಳಪ" ಹೇಳಿ ನಿಂಗ ಮಾತಾಡ್ಕ್ಯತ್ತಿ, ನಂಗೊತ್ತಿಲ್ಯನ ಅಪ್ಪಿ. ಇಲ್ಕೇಳಿಲ್ಲಿ. ಬರಿ ಕನ್ನಡ ಒಂದೆ ಬರದು ನಂಗೆ ಅನ್ಕಂಡು, ಅಮೇರಿಕಕ್ಕೆ ಬಂದ್ರೆ, ಯೆನ್ನ ಬಾಸು ವಿಮಾನನಿಲ್ದಾಣದಗೆ ಸಿಕ್ಕಿದವ್ನೆ, "ಹೆಯ್! ಕೈಸೆ ಹೊ?" ಅಂತ ಕೇಳಕ್ಕಾ? ಹೊಗ್ಲಿ. ಅವ್ರ ಮನೆ ಆತು, ಎಲ್ಲರು ಹಿಂದಿ ಮಾತಾಡ್ತ, ಅವ್ರ ಜೊತೆಗೆ, ಅಲ್ಲಿ ಇಲ್ಲಿ ಸಿನೆಮಾ ನೋಡಿ ಕಲ್ತ್ಗಂಡಿದ್ ಹಿಂದಿಲಿ ಮಾತಾಡಿ ಕಳತ್ತು. ಇಲ್ಲಿ DL ತಗಳಣ ಅಂತ driving class ಗೆ ಸೇರಣ ಅಂತ ಪೊನ್ ಹಚ್ಚಿರೆ, "hello! driving school. Kevin here", ಅಂತ ಉತ್ರ. ಎಲ್ಲ ಆತು, ಶುರು ಮಾಡಣ ಅಂತ ಕ್ಲಾಸ್ಗೆ ಹೊದ್ರೆ, ಅಲ್ಲಿ ನಮ್ಮ 'ಕರಣ್ ಬಾಯಿ' ಕಲ್ಸದು. ಅವನ್ ಪ್ರಕಾರ ಯೆಂಗೆ ಡೆಲ್ಲಿನಡ :ಓ ನನ್ನ ಹಿಂದಿ ನೊಡಿರೆ ಚೆನಾಗೆ ಬತ್ತು ಹೇಳ್ತ್ನಪ್ಪ ಅವ. ಸರಿ, ಎಮ್ ಬಾಸ್ ಮನೆಲಿ ಕೆಲ್ಸಕ್ಕೆ ಹೇಳಿ ಬರವ್ಳು mexican ಅಂತ ಗೊತಾತು. ಅವ್ಳಿಗೆ 'ಹೊಲಾ! ಕೊಮೊ ಎಸ್ತಾಸ್?' ಅಂತ ಕೇಳಿರೆ ಅವ್ಳು ಎನ್ನ ಲ್ಯಾಟಿನೊ (ಹೊಯ್! ಲಾಟೀನು ಅಲ್ಲ, ಹಂಗಂತ ಇಂಗ್ಲಿಶಗೆ ಹೇಳಿರೆ, ದಕ್ಷಿಣ ಅಮೇರಿಕದವ ಅಂತ) ಅಂದ್ಕ ಬಿಟ್ಳಡ. 'ಬಿಯೆನ್ ಸೆನ್ಯೋರ್! ಇ ತು?' ಉತ್ರ. ನಾ ಹೆದ್ರಲ್ಲೆ. 'ಬಿಯೆನ್ ಬಿಯೆನ್! ಗ್ರಸಿಯಾಸ್' ಅಂದಿ. ವಿಚಾರ ಯೆಂತಪ್ಪ ಅಂದ್ರೆ, ಸ್ಪಾನಿಷ್ ಚೂರುಪಾರು ಬತ್ತು. ಉಪ್ಯೊಗ್ಸನ ಅಂತ. ಕೆಲ್ಸ್ ದವ್ಳಿಗೆ ಮಗ್ಳಿದ್ರೆ ಉಪ್ಯೊಗಕ್ಕೆ ಬತ್ತೇನ ಹೇಳಿ.

ಮುಖ್ಯ ವಿಚಾರ ಯೆತ್ಲೆತ್ಲಗೊ ಹೊತು. ಸರಿ, ಇಪ್ಪತ್ತು ಸಾವ್ರ ಮೈಲಿ ದೂರ ಬಂದಾಗ ನಾನು ಭಾರತೀಯ ಅನ್ಸ್ತು. ಯೆಂತಾರು ಹೇಳಿ. ಎಂಗೆ, ತಲೆಲಿ, ಹೃದಯದಗೆ, ರಕ್ತದಗೆ ಬರದು ಕನ್ನಡ ಒಂದೆ.

ಮೇಲಿಂದೆಲ್ಲಾ ಒದಿ ಆತಾ? ಯೆಂತ ಅನ್ಸ್ತು? ವಿಚಾರ ಇದಲ್ಲ. ಇದೆಲ್ಲಾ ಪೀಠಿಕೆ. ಮುಂದೆ ಬರಿಯೊದು ನಿಜವಿಚಾರ. ಮೇಲಿನ ವಿಚಾರಗಳನ್ನ ಒದಿದ್ರೆ ಒಂದು ಸಾಮಾನ್ಯ ಪದ ಜ್ಞಾಪಕಕ್ಕೆ ಬತ್ತಾ? ಅದು 'ಮಾತೃ', ಮಾತೃಭಾಷೆ, ಮಾತೃಭೂಮಿ, ಮಾತೃಸಂಸೃತಿ, ಇಲ್ಲೆಲ್ಲ ಇರೊದು ಒಂದೆ ಪದ 'ಅಮ್ಮ' ಅಥವಾ 'ಮಾತೆ'. ಮೊದಲೆ ಹೇಳಿದಂತೆ, ನಂಟು, ಬಂದನ, ಯೆಲ್ಲವು ಶುರು ಆಗೋದು ಅಮ್ಮನಿಂದಲೆ. ಎಲ್ಲೆ ಇರಲಿ, ಏನೆ ಮಾಡ್ಲಿ, 'ಅಮ್ಮ' ಅನ್ನೊ ಒಂದು ಬಾವನೆನ ಬದಲಾಯಿಸಲು ಸಾದ್ಯನೆ ಇಲ್ಲ. ನನ್ನ ಮಟ್ಟಿಗೆ ಹೇಳೊದಾದ್ರೆ, ನಾನು ಇಂದು ಏನಾಗಿದಿನೋ, ಮುಂದೇನಾಗ್ತಿನೊ, ಎಲ್ಲವು ನನ್ನಮ್ಮನಿಂದಲೆ. 'I miss you mom'. ಹೌದು, ಅಮ್ಮ ಮುಖ್ಯ ಅಂತ ನಾವು ಯೊಚಿಸೊದೆ ಇಲ್ಲ ಕೆಲವೊಮ್ಮೆ, ಯಾಕೆಂದ್ರೆ, 'ಅಮ್ಮ' ಅನ್ನೊ ಶಬ್ದ ಒಂದು ಸಹಜತೆ. ಅದು ಒಂದು ತರ ಬೆಚ್ಚನೆಯ ನಂಬಿಕೆ ಕೊಡುತ್ತೆ, ನನ್ನ ಏಳ್ಗೆಗೆ, ನನ್ನ ಜೇವನದ ಬಗ್ಗೆ ಒಂದು ಜೀವ ಬೇಡ್ತಾ ಇದೆ ಅನ್ನೊ ಒಂದು ನಂಬಿಕೆ. ಅಮ್ಮನಿಂದ ದೂರ ಬಂದು ಏನು ಸಾದನೆ ಮಾಡ್ತಾ ಇದಿನಿ ಅನ್ನೊ ಬಾವನೆ ಕೆಲವೊಮ್ಮೆ ಕಾಡುತ್ತೆ, ಆದರೆ, ನನ್ನಮ್ಮ ನನ್ನ 'ಬಂದನ'ಕ್ಕೆ ಒಳಪಡಿಸಿಲ್ಲ, ನಂಟಿದೆ. ಗಾಡ ನಂಟು. ಅಮ್ಮನ ದಿನದ ಈ ವಾರದಲ್ಲಿ, ಅಮ್ಮ, ನನ್ನ ಜೀವನದಲ್ಲಿ, ನಿನ್ನ ಮಹತ್ವದ ಬಗ್ಗೆ ನೆನ್ಸ್ಕೊಂಡ್ರೆ ಯೋಚನೆಗಳು ದಿಕ್ಕು ತಪ್ಪುತ್ತೆ, ಎದೆ ಬಡಿತ ಏರುಪೇರಾಗುತ್ತೆ. ಇಷ್ಟು ವರ್ಷದಲ್ಲಿ ಒಂದೆ ಒಂದು ಕಡೆ ನೀನು 'ಬೇಡ' ಅಂದಿದ್ರೆ ನನ್ನ ಜೀವನದ ದೆಸೆ ಬೆರೆಡೆ ಇರುತ್ತಿತ್ತು.
You are a perfect mother. May not be the one who took care of me so much that I never went out of your site, but surely the one who shaped my life, beautifully, to be precise. People say I am lucky, But I know, that I am lucky because you are my mother. Mom, I love you.

"ಆ ದಿನಗಳು", ಎಲ್ಲರ ಮನಸಿನಲ್ಲೂ ಒಂದಲ್ಲ ಒಂದು ಖುಷಿಕೊಡುವ ಶಬ್ದ. ಅಮ್ಮನ ವಿಚಾರವಾಗಿ ನೆನಸಿಕೊಂಡಾಗ, ತಲೆತುಂಬಾ ಇರುವ ವಿಚಾರಗಳು, ನಗೆ, ದುಃಖ, ಕಣ್ಣೀರು, ಎಲ್ಲವನ್ನೂ ಒಟ್ಟಿಗೆ ಮನಕ್ಕೆ ತರುತ್ತದೆ. ಸಣ್ಣವನಿರುವಾಗ ತಪ್ಪು ಮಾಡಿದಾಗ, ಹೊಡಿಯದೆ, ಬರಿ ಬುದ್ದಿವಾದ ಹೇಳಿ, "ಇವಂಗೆಂತಕ್ಕೆ ಎಷ್ಟೆಳಿದ್ರು ಅರ್ಥಾಗ್ತಲ್ಯಪ" ಹೇಳ್ಕೊತ ಕಣ್ಣಗೆ ನೀರು ತಂದ್ಕೊತ ಇದ್ದಿದ್ದು, ಬಿದ್ದು ಕಾಲು ಮುರಿದು ಕೊಂಡಾಗ ನನ್ನ ಶುಶೃಷೆ ಮಾಡಿದ್ದು. 7 ವರ್ಷಗಳು ನಾನು ನವೋದಯದಲ್ಲಿ ಇದ್ದಾಗ, ತಿಂಗಳ ಮೊದಲ ಭಾನುವಾರ, ಬೆಳ್ಬೆಳಿಗ್ಗೆ 4ಗಂಟೆಗೆ ಯೆದ್ದು, ತಿಂಡಿ ಕಟ್ಕಂಡು, ಹೆಚ್ಚುಕಡ್ಮೆ ನೂರು ಕಿಲೋಮಿಟೆರ್ ದೂರದ ಗಾಜನೂರಿಗೆ ಗಂಟೆಗಟ್ಟಲೆ ಬಸ್ ಕಾದು, ಒಜ್ಜೆ ಚೀಲ ಹೊತ್ಗಂಡು, ನನ್ನ/ಅಕ್ಕನ್ನ ನೋಡಕ್ಕೆ ಬರಕ್ಕೆ ನೀನು ಎಷ್ಟು ಕಷ್ಟಪಟ್ಟಿದ್ದೆ, ಅಲ್ಲಿಗೆ ಬಂದಕೂಡ್ಲೆ, ನಾನು ಬರಿ ತಿಂಡಿ ಚೀಲ ಒಂದು ತಗಂಡು, "ಅರಾಮಿದ್ಯಾ?" ಹೇಳೂ ಕೇಳ್ದೆ ಇರ್ತಿದ್ದು, ಮನೆಲಿರೊ ಹಣಕಾಸಿನ ಕಷ್ಟ ನನ್ನ ವಿಧ್ಯಾಭ್ಯಾಸಕ್ಕೆ ತೊಂದ್ರೆ ಮಾಡ್ಲಾಗ ಅಂತ, ನೀನು ಎಷ್ಟೆ ಕಷ್ಟಪಟ್ಟರೂ ಅಡ್ಡಿಲ್ಲೆ, ನಾನು ಮಾತ್ರ ಓದು ಮುಗ್ಸಕ್ಕು ಅಂತ ದೃಡನಿರ್ದಾರ ಮಾಡಿ ನನ್ನ ಓದ್ಸಿದ್ದು. ಆಮೇಲೆ ನಂಗೆ ಕೆಲ್ಸ ಸಿಕ್ಕಿದ್ ಮೇಲೆ, ಕೈಲಿ ದುಡ್ಡಿದ್ರೂ ಅಂಗಡಿಗೆ ಕರ್ಕೊಂಡು ಹೋಗಕ್ಕೆ ನಂಗೆ ಟೈಂ ಇಲ್ಲೆ ಅಂತ ನಾ ಹೇಳಿದ್ರೂ, ಒಂದು ದಿನನೂ ನನ್ನ ಮೇಲೆ ಸಿಟ್ಟು ಮಾಡ್ಕೊಳ್ದೆ, ಅಮ್ಮ, ನಿನ್ನ ತಾಳ್ಮೆ, ನಿನಗೆ ನಾನು ಕೊಟ್ಟ ದುಃಖ, ಒಟ್ಟಾರೆ ನಾನು ಈಗ ನನ್ನ ಲ್ಯಾಪ್ಟಾಪ್ನ ಪರದೆ ಮಬ್ಬಾಗಿದೆ. ಒಹ್! ಅದು ನನ್ನ ಕಣ್ಣೀರಿನಿಂದ ನಿನಗೆ ಹೇಳ್ಬೆಕಾಗಿಲ್ಲ ಅಲ್ವಾ? ನನಗೆ ಗೊತ್ತು, ನಾನು ಅಲ್ಲಿದ್ದಾಗ ನಿನಗೆ ನನ್ನ ಸಮಯದಲ್ಲೆ ಸಲ್ಲಬೇಕಾದ ಪಾಲು ಕೊಟ್ಟಿಲ್ಲ ಅಂತ, ಕ್ಷಮಿಸಮ್ಮ. ಆದರೆ ನನಗೆ ಗೊತ್ತು, ನನ್ನ ಮನಸಾರೆ ನಿನಗೆ ಹೇಳುತಿದ್ದೇನೆ, ನನ್ನ ಸಮಯದ ಪಾಲನ್ನ ನಿನಗೆ ಮೀಸಲಿಡುತ್ತೆನೆ.

ನನಗೆ ಈಗ ಅರ್ಥವಾಗ್ತಾ ಇದೆ, ಜನಕ್ಕೆ ಯಾಕೆ 'ಅಮ್ಮನ ದಿನ', 'ಅಪ್ಪನ ದಿನ', 'ಮಕ್ಕಳ ದಿನ', 'ಅಕ್ಕನ ದಿನ', 'ಗೆಳೆಯರ ವಾರ' ಗಳು ಬೇಕು ಅಂತ. ಬಹುತೇಕ ಜನ ಕೆಲಸ, ಅದುಇದು ಅಂತ, ತಮ್ಮನ್ನ ತಾವೆ ಮರೆತಿರುತ್ತಾರೆ, ಅವರಿಗೆ ಇಂಥ ದಿನಗಳು ಬೇಕು. ಈ ಮೊದಲು ನನ್ನ ಪ್ರಕಾರ ಆ ತರಹದ ಜನ ಕಡ್ಮೆ, ಆದ್ರೆ ಈಗ, ನಾನೆ ಅವರಲ್ಲಿ ಒಬ್ಬ, ಮತ್ತು ಈ ತರಹದ ಜನರು ತುಂಬಾ ಇದ್ದಾರೆ ಎಂದು ಅರಿವಾಗಿದೆ. ನಮ್ಮನ್ನು ಇಷ್ಟ ಪಡುವವರನ್ನು ವರ್ಷದಲ್ಲಿ ಒಮ್ಮೆನಾದ್ರೂ ನೆನ್ಪಸ್ಕೋ ಬೇಕು.

ಅಮ್ಮಾ, ಈ ಲೇಖನ ನಿನಗೆ ಸಮರ್ಪಣೆ.

ಮಂಗಳವಾರ, ಮೇ 6, 2008

ಅತಿ ಆಸೆ ಗತಿಗೇಡು

ಇವತ್ತು ನಾನು, ಪ್ರಸಾದ್ ಹೆಗಡೆ ಲೋಕಾರೂಡಿ ಇ-ಹರಟೆ ಹೊಡಿತಾ ಇದ್ದಿದ್ಯ. ಮಾತಾಡ್ತ, ಮಾತಾಡ್ತ ಮದುವೆ, ಜೀವನ ಅಂತ ವಿಚಾರ ಬಂತು. ನಂಗ್ಳಿಬ್ರ ಯೋಚ್ನೆನು ಸುಮಾರು ಒಂದೆ ತರ ಇತ್ತು. ಅದಕ್ಕೆ, ನಂಗ ಇಬ್ರೆ ಈ ತರ ಯೋಚ್ನೆ ಮಾಡದ, ಅಥ್ವ ನಿಂಗನೂ ಯಾರಾದ್ರು ಹಿಂಗೆ ಯೋಚ್ನೆ ಮಾಡ್ತ್ರ ಹೇಳಿ ಕೇಳಕ್ಕಿತ್ತು.

ಹೌದು, ಅವತ್ತು ಎನ್ನ ಗೆಳ್ತಿ ಒಬ್ಳು ಹೇಳಿದಂಗೆ ಎನ್ನ ಆಸೆ ಸ್ವಲ್ಪ ಹೆಚ್ಚ್ಗೆನೆ ಇದ್ದು. ಹುಡ್ಗಿ ಚೆನಾಗಿರಕ್ಕು, ಸ್ವಂತಕ್ಕೆ ನಿರ್ದಾರ ತಗಳ ಹಂಗೆ ಇರಕ್ಕು, ಪುಸ್ತ್ಕ, ತಿರ್ಗಾಟ ಅಂದ್ರೆ ಇಷ್ಟ ಇರಕ್ಕು, ಅಡ್ಗೆ ಮಾಡಕ್ಕೆ ಬರಕ್ಕು, ಹೇಳ್ತಾ ಹೊದ್ರೆ ಪುಸ್ತ್ಕ ಬರಿಲಕ್ಕು. ಅಲ್ಲ, ನಿಂಗನೆ ಹೇಳಿ, ಎನ್ನ ಗುರಿ ಎತ್ರಕ್ಕೆ ಇಟ್ರೆ ತಪ್ಪಾ? ಹಂಗಂತ ಎನ್ಗಂತೂ ಎಂತ ಗಡಿಬಿಡಿ ಇಲ್ಲೆ. ದಿನ, ಹೊಗ್ಲಿ, ವರ್ಷನೆ ಬಾಕಿ ಇದ್ದು. ಆದ್ರು ಒಂದು ಪ್ರಶ್ನೆ ಮಾತ್ರ ಉತ್ತ್ರಿಲ್ದೆ ಉಳ್ದೊಗ್ತು ಹೇಳಿ ಬೇಜಾರು.

ಹೊಗ್ಲಿ, ಅಪ್ಪಿತಪ್ಪಿ ಅಲ್ಲಿಇಲ್ಲಿ ಒಬ್ಬೊಬ್ರು ಹುಡ್ಗಿರು ಇಷ್ಟ ಆದ್ರೂ, ಅವ್ರಿಗೆ ಮದ್ವೆ ಆಗಿರ್ತು ಅಥ್ವ, ಮಾಣಿ ನಿಶ್ಚಯ ಮಾಡ್ಕಂಡಿರ್ತ. ಒಟ್ಟಾರೆ, ಯೆಂಥೊ ಸರಿ ಇಲ್ಲೆ :(

ಕೆಲ್ವೊಮ್ಮೆ, ಗಿರಿ ಭಾವಯ್ಯನ status ನೆನ್ಪಾಗ್ತು. 'If you aim at nothing, you hit everytime' ಆ ತರ ಯೋಚ್ನೆ ಮಾಡಿದ್ರೆ, ಯೆಲ್ಲಾ ಹುಡ್ಗಿರೂ ಇಷ್ಟ ಆಯಕ್ಕು. ಆದ್ರೆ, ಎನ್ನ ಜಾಯ್ಮಾನ ಅಲ್ಲ ತಗ ಅದು. ಎನ್ನ ಗುರಿ ಯಾವಾಗ್ಲೂ ಮೇಲೆಯ. ನಾ ಶುರು ಮಾಡದೆ ಆಗೆ ಆಗ್ತು ಹೇಳ್ಕ್ಯೊತ. ಯೆಂತಾರು ಆಗ್ಲಿ. ಗುರಿ ಮುಟ್ತಿ ಹೇಳಿ ನಂಬ್ಕೆ.

ಹೊಯ್! ಅಮ್ಮಿ, ನೀ ಯೆಂತಾರು ಇದನ್ನ ಒದಿದ್ರೆ, ಬೇಜಾರಾಗಡ, ನೀ ಯೆಂಗೆ ಇಷ್ಟ ಆಗ್ದೆ ಇರಕ್ಕೆ ಸುಮಾರು ಕಾರಣ ಇದ್ದಿಕ್ಕು. ಗೊತಿದಲ, ನಾ ಒಂತರ ಹುಚ್ಚ ಮೊದ್ಲೆ. ಬೊಷ ನಾನು ನೀನು ತೀರ ಇಷ್ಟ ಆಗ ಅಷ್ಟು ಒಟ್ಟಿಗೆ ಒಡಾಡಲ್ಲೆ ತಗ. :| ನೋಡಣ, ಸದ್ಯಕ್ಕಂತು ಆನು ಸಿಕ್ಕಾಪಟ್ಟೆ ಕೆಲ್ಸ ಮಾಡಣ ಅಂತ ತೀರ್ಮಾನ ತಗಂಡು ಆಯ್ದು. ಇನ್ನೊಂದು ೨-೩ ವರ್ಷದಗೆ ಕೋಟ್ಯಾಧೀಶ ಆಪ ಅಂದಾಜಿದ್ದು ಯೆಂಗೆ. ದುಡ್ಡಿದ್ರಾರು ತಲೆ ಇರೊ ಹುಡ್ಗಿ ಸಿಗ್ತಾಳ ನೋಡಕ್ಕು. (ನೀವು ತಲೆ ಇರೋ ಹುಡ್ಗಿ ಆಗಿದ್ರೆ, ಕ್ಷಮೆ ಇರಲಿ. mostly ನಿಮ್ಮನ್ನ ನಾನು ಬೇಟಿ ಆಗಿಲ್ಲ, ಅಥವಾ ನಿಮಗೆ ತಲೆ ಇದೆ ಅಂತ ನನಗೆ ಗೊತ್ತಾಗಿಲ್ಲ)

ಟಿಪ್ಪಣಿ: ಇದು ಯಾರದ್ದೆ ಮನಸಿಗೆ ನೋವಾಪಲೆ ಬರೆದ ಇ-ವಿಚಾರವಲ್ಲ. ನನ್ನ ಅನಿಸಿಕೆಗಳ ಬಗ್ಗೆ ತಮಗೆ ಅಸಮಾದಾನವಿದ್ದಲ್ಲಿ, ನನ್ನಲ್ಲಿ ನೇರವಾಗಿ ಅರಹಿಕೊಳ್ಳಬೇಕಾಗಿ ವಿನಂತಿ.