* ಸದ್ಯಕ್ಕೆ ನನ್ನ ಅಮೆರಿಕಾದಲ್ಲಿನ ಕ್ಯಾಂಪಿಂಗ್ ತಿರ್ಗಾಟ ಎಲ್ಲ ಮುಗತ್ತು. (for more info check http://undadigunda-travel.blogspot.com )
* ಮೊದ್ಲೆಲ್ಲ ನಾನು 'single', ಅಂತ ಬೇಜಾರ್ ಆಗ್ತಾ ಇತ್ತು. ಈಗ 'engaged' ಆದ್ರೂ ದೂರ ಇರಕ್ಕಲ ಹೇಳಿ ಬೇಜಾರು :-(
* ಸುಮಾರು ಜನಕ್ಕೆ ನಾನು ಒಪ್ಪಿದ್ದು ಮನೆಯವ್ರು ನೋಡಿದ್ ಹುಡ್ಗಿ ಹೇಳಿ ಬರ್ತಿ ಆಶ್ಚರ್ಯ ಆತಡ. ಒಳ್ಳೆ ಕತೆ ಆತು. ಹುಡ್ಗಿ ಮನ್ಸಿಗೆ ಹಿಡ್ಸದು ಮುಖ್ಯ ಅಲ್ದಾ? ನಂಗಂತೂ ಸದ್ಯ ಬಾಳ ಒಳ್ಳೆ ನಿರ್ದಾರ ತಗಂಡಿ ಅಂತ ಅನ್ಸ್ತಾ ಇದ್ದು.
* ಇಲ್ಲಿ ಚಳಿಗಾಲ. ಹೆಚ್ಗೆ ಎಂತು ಆಟ ಎಲ್ಲ ಇಲ್ಲೆ. ಅದಕ್ಕೆ ಗೋಲ್ಫ್ ಆಡಕ್ಕೆ ಶುರು ಮಾಡಿದ್ದಿ. ಒಳ್ಳೆ ಮಜಾ ಆಗ್ತು. ಹೋಗಿ ಸಮಾ ಬಾರ್ಸದು, ಚೆಂಡಿಗೆ. ಯಾರ್ ಮೇಲಾರು ಸಿಟ್ಟಿದ್ರೆ ಈ ಆಟ ನಿಂಗ ಆಡಕ್ಕು.
* ಸುಮಾರು ಜನ ಕೇಳ್ತಾ ಇದ್ದ, "ನೀನು ಬ್ಲಾಗ್ ಬರ್ಯದು ಬಿಟ್ ಬಿಟ್ಯ?" ಹೇಳ್ಕೊತ. ನಾನು ಜನ ಒದಕ್ಕು ಹೇಳಿ ಬ್ಲಾಗ್ ಬರದ್ದು ಯಾವಾಗ ಹೇಳಿ? ಮೊದ್ಲೇ ಮನ್ಸ್ ಬಂದ್ ಗಿರಾಕಿ. ಎಂತಾರು ಬರ್ಯಕ್ಕು ಅನ್ಸಿರೆ ಬರ್ಯದಪ. ನೋಡನ, ಯಾವತ್ತಾರು ಒಂದ್ ದಿವ್ಸ ನಾನು ಸುಮಾರು ಉದ್ದ ಕಥೆ ಕವನ ಬರಿತ್ನೇನ, ಯಾರಿಗ್ ಗೊತಿದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ