ಬುಧವಾರ, ಆಗಸ್ಟ್ 19, 2009

random post - 081809

* ಇಲ್ಲಿ ಬೇಸಿಗೆ ಕಳೆದು ಹೋಗ್ತಾ ಇದ್ದು. ಸುಮಾರಷ್ಟು ಜಾಗ ನೋಡದು ಬಾಕಿ ಉಳದ್ದು, ಬೇಗ ಬೇಗ ನೋಡಕ್ಕು.
* ಅಕ್ಟೋಬರ್ ನಲ್ಲಿ ಭಾರತಕ್ಕೆ ಹೋಗಿ ಬರಕ್ಕು.
* ಆಗಸ್ಟ್ 09 ನೆ ತಾರೀಕು, ಬೇ ಏರಿಯ ಕನ್ನಡ ಬ್ಲಾಗ್ಗರ್ಸ್ ಮೀಟ್ ಇತ್ತು. ಸುಮಾರು ಜನ ಕನ್ನಡದಲ್ಲಿ ಬರಿಯೋರನ್ನೆಲ್ಲ ಬೇಟಿ ಮಾಡಿ ಖುಷಿ ಆತು.
* ಸ್ವಲ್ಪ ಕೆಲಸ ಕಡಮೆ ಇದ್ದು, ಅದೇ ಹೆಳೆಲಿ ಸುಮಾರು ಈಜು ಹೊಡಿಯದು, ಗರಡಿ ಮನೆ ಕಸರತ್ತು ಎಲ್ಲ ಮಾಡಕ್ಕೆ ಸಮಯ ಸಿಕ್ಕಿದ್ದು.
* ಮೊನ್ನಿತ್ಲಗೆ ಯೋಸೆಮಿತೆ ಗೆ ಹೋಗಿ "Half Dome" ಕಲ್ಲಿನ ಬಂಡೆ ಹತ್ತಿಳ್ದು ಬಂದಿ (ಎರಡನೇ ಸಲ)
* ಇಷ್ಟು ದಿನ ಆಡಿದ್ದಕ್ಕೆ ವಾಲಿಬಾಲ್ ಆಟ ಸ್ವಲ್ಪ ಚೆನಾಗೈದು.
* ಗೆಳೆಯ ಪ್ರಸಾದ್ ಮದ್ವೆ ಆಗ್ತ ಇದ್ದ, ಅದು ಇದು ಹೇಳಿ ನಂಗು ತಲೆ ಕೆಡಸಿ ನನ್ನೂ ಮದ್ವೆ ಮಾಡ್ಕ್ಯ, ವರ್ಷಾತು ಹೇಳಿ ನಂಬ್ಸಿದ್ದ.. ನೋಡಕ್ಕು ಎಂತ ಕತೆ ಹೇಳಿ.
* ಮುಂದಿನ ವರ್ಷದ ಬುಡದಲ್ಲಿ ವಾಪಸ್ ಹೊಂಟಿ ನಾನು ಭಾರತಕ್ಕೆ. (ಫುಲ್ ಟೈಮ್)
* MS (ನನ್ನ ಗೆಳೆಯ, ರೂಂಮೇಟ್) ಒಳ್ಳೆ ಅಡ್ಗೆ ಮಾಡ್ತ, ಅದಕ್ಕೆ ದಿನಾನು ಒಳ್ಳೆ ಊಟ :-)

3 ಕಾಮೆಂಟ್‌ಗಳು:

Explorer ಹೇಳಿದರು...

I like this kannada accent :)

garadi kasarattu andre gym aa?

bulde ಹೇಳಿದರು...

ಹೌದು! ಗರಡಿ ಮನೆ ಅಂದ್ರೆ ಹಳೆ ಕಾಲದ 'gym', ಕುಸ್ತಿಪಟುಗಳು ದೇಹ ದಂಡಿಸುತ್ತಿದ್ದ ಜಾಗ. ಕಸರತ್ತು ಅಂದ್ರೆ 'workout'.

ಜಿ.ಎಸ್.ಬಿ. ಅಗ್ನಿಹೋತ್ರಿ ಹೇಳಿದರು...

ನಮಸ್ಕಾರ
ನಿಮ್ಮ ಬ್ಲಾಗ್ ಓದಿ ಕುಶಿ ಆತ್ರೋ... ಹವ್ಯಕ ಭಾಷೆ ಬಗ್ಗೆ ಒಳ್ಳೆ ಅಭಿಮಾನ.... ದಯವಿಟ್ಟು ಟಚ್ ನಲ್ಲಿ ಇಪ್ಪ ಅಕ್ಕಾ....?