ಗುರುವಾರ, ಮಾರ್ಚ್ 12, 2009

ಬಿಟ್ಬಿಡ್ಲಾಗ ಹೇಳಿ...

ಹೌದು ಮತ್ತೆ.. ಕೆಲ್ಸ ಕೆಲ್ಸ ಹೇಳ್ಕ್ಯೋತ ಬರ್ಯದೆ ಬಿಟ್ಬಿಟ್ರೆ ಸ್ವಲ್ಪ ವರ್ಷ ಆದ್ಮೇಲೆ ಬರ್ಯಕ್ಕೆ ಪುರ್ಸೋತ್ತಿದ್ರೂ ಬರ್ಯಕ್ಕೆ ಬತಲೆ. ಅದ್ರಗೂ ನನ್ ತರ ಮೈಗಳ್ರಿಗೆ, ಮೊದ್ಲೆ ಬರ್ಯಕ್ಕೆ ಬತಲೆ, ಬಿಟ್ರೆ ಅಕ್ಷರವೂ ಮರ್ತು ಹೋಗ್ತು ಅಷ್ಟೆ.

ಬರ್ಯದು ಎಷ್ಟು ಮುಖ್ಯ ಈಗಿನ್ ಕಾಲ್ದಗೆ ಅಂದ್ರೆ, ಒಳ್ಳೊಳ್ಳೆ ಬ್ಲಾಗು, ಲೇಖನ ಬರ್ದ್ರೆ ನಂ ಹುಡ್ರು ಪುಲ್ ಪಾಪುಲರ್ ಆಗೋಗ್ತ. ಹಂಗೆ ಇದೊಂತರ ಸಮಾನ ಮನಸ್ಕರ ಬಳಗ ಹುಟ್ಟಾಕ್ಕಕ್ಕೂ ಉಪಯೋಗಕ್ಕೆ ಬತ್ತು. ಅದೊಂದೇ ಅಲ್ಲ.. ಈ ಇಂಟರ್ನೆಟ್ ಯುಗದಲ್ಲಿ ನಮ್ದೊಂದು ಬ್ಲಾಗ್ ಇಲ್ಲೇ ಅಂದ್ರೆ, ಆರ್ಕುಟ್/ಫೇಸ್ ಬುಕ್ ಅಕೌಂಟ್ ಇಲ್ಲೇ ಅಂದ್ರೆ, IM ನಲ್ಲಿ (may be yahoo, gtalk, AIM, irc, jabber, msn etc) ಲಾಗಿನ್ ಆಗಿರ್ದೆ ಹೋದ್ರೆ ಬದ್ಕಿದ್ದೆ ಸುಳ್ಳೆನ ಅಂತ ಆಗೋಗ್ತು. ಅದಕ್ಕೆ ಸುಮ್ನೆ ಬಿಟ್ಬಿಡ್ಲಾಗ ಹೇಳಿ ಈ ಪೋಸ್ಟು.

ಸದ್ಯ ರೆಸೆಶನ್ ಬೇರೆ, Q1 ಬೇರೆ ಮುಗೀತ ಬಂತು. ನಂ ಕಂಪನಿ ಈಗ ವೆಂಚೆರ್ ಕ್ಯಾಪಿಟಲಿಸ್ಟ್ ಗಳ ಕೈಲಿ ಸ್ವಲ್ಪ ದುಡ್ಡು ಇಸ್ಕಂಡು ದೊಡ್ಡ ಆಪಲೇ ಹೊಂಟಿದ್ದು, ಖುಷಿ ವಿಚಾರ. ಆದ್ರೆ ಅದ್ರ ತೊಂದ್ರೆ ಎಂತಪ ಅಂದ್ರೆ, ತಿಂಗ್ಳು ತಿಂಗ್ಳು ದುಡ್ಡು ಎಷ್ಟು ಆತು, ಎಷ್ಟು ಜನ ಹೊಸ ಗ್ರಾಹಕರು ಸಿಕ್ಕಿದ್ದ, ಅದು ಇದು ಹೇಳಿ ತಲೆ ತಿಂತ. ಅದಕ್ಕೆ ನಂಗಂತೂ ಮು.ಹ. ಕೆಲ್ಸ. ನಮ್ದು ಬೇರೆ free software ಕಂಪನಿ. ನಂಗನೆ ಕೋಡ್ ಮಾಡಕ್ಕು, ನಂಗನೆ ಸಪೋರ್ಟ್ ಮಾಡಕ್ಕು. ನಂಗೆ ಬರಿ ಕೋಡಿಂಗ್ ಇಷ್ಟ, ಸಪೋರ್ಟ್ ಮಾಡದಿಲ್ಲೆ ಹೇಳ್ಕೋತ ಕುತ್ಕಂಡ್ರೆ ಹೊಟ್ಟಿಗಿರದಿಲ್ಲೆ.

ಇಷ್ಟು ಬರಿಯ ಹೊತ್ತಿಗೆ mailbox ನಲ್ಲಿ ಸುಮಾರು ಮೈಲ್ಸ್ ಬಂದು ಕೂತಿದ್ದ. Q1 ಮುಗ್ದ ಮೇಲೆ ಸಿಗ್ತಿ, ಅಲ್ಲಿವರಿಗೆ ಟಾಟಾ.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

>>ಅದಕ್ಕೆ ನಂಗಂತೂ ಮು.ಹ. ಕೆಲ್ಸ
ಹಹಹಾ
ಮಗನೇ ಕಯೋಟಿ ಬುಟ್ಟೆ ನೆನ್ಪಿಟ್ಕ (ನಂದೂ ಉತ್ರಕನ್ನಡದ್ದು ಇರ್ಲಿ ಅಂತೇಳಿ, ಇದು ಹವ್ಯಕ ಅಲ್ಲ ಮತ್ತೆ). ಕೋಳಿ ನ್ಯೂ ಜೆರ್ಸಿಗೆ ಬಂದಿದ್ ಗೊತ್ತಾಯ್ತ. ಅವ್ಗೂ ಹೇಳಿದ್ದೆ, ಬರ್ತೆ ಅಂದನೆ.