ಇಂದಿನ ಪತ್ರಿಕೆಯಲ್ಲಿ ಬಂದ ಸಂವಾದದ ಒಂದು ಕಿರು ಚಿತ್ರಣ. (well, it was an interview infact, with Devid Prali (aka, vaamadeva shastri), who was born catholic, converted to hinduism).
----
ಪ್ರ: ಜಗತ್ತಿನಲ್ಲಿ ಏನೇ ಆಗಲಿ, ಸನಾತನ ಧರ್ಮ ಉಳಿದೇ ಉಳಿಯುತ್ತದೆ; ಅದಕ್ಕೆ ಯಾವುದೇ ಅಪಾಯವೂ ಒದಗದು ಎ೦ಬ ನಂಬಿಕೆ ಹಲವರಲ್ಲಿದೆ. ಈ ಪ್ರವೃತ್ತಿ ಆತ್ಮಘಾತಕವಲ್ಲವೇ ?
ಉ: ಹಿಂದೂ ಧರ್ಮದಲ್ಲಿ ಕರ್ತವ್ಯ ಮತ್ತು ಕರ್ಮದ ಪರಿಕಲ್ಪನೆಯಿದೆ. ಪ್ರತಿ ವ್ಯಕ್ತಿಗೂ ಒಂದಿಷ್ಟು ಕರ್ತವ್ಯಗಳಿವೆ. ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸದೆ ಇದ್ದರೆ ಜಗತ್ತು ಹೇಗೆ ಉತ್ತಮ ಆದೀತು? 'ನಾನು ಏನೂ ಮಾಡದೇ ಸುಮ್ಮನೇ ಕೂರುತ್ತೇನೆ. ಆಗೋದೆಲ್ಲ ಆಗಲಿ' ಎಂದರಾಗದು. ಮಹಾಭಾರತದ ಸಂದೇಶ ಏನು? ಪಾಂಡವರು ಧರ್ಮದ ರಕ್ಷಣೆಗಾಗಿ ಯುದ್ದ ಮಾಡಿದರು; ಮನೇಲಿ ಕೂರಲಿಲ್ಲ. ಬಹಳ ಹಿಂದೂಗಳು ದುಡಿಮೆಗಷ್ಟೇ ಗಮನ ಕೊಡುತ್ತಿದ್ದರೆ. ಅದನ್ನು ಮೀರಿ ಸಮಾಜದ ಪ್ರಗತಿಗೆ ಅವರು ಗಮನ ಕೊಡಬೇಕು. ಹಿಂದು ವಿಚಾರಗಳಿಗೆ ಬೆಂಬಲ ನೀಡಬೇಕು. ಪಶ್ಚಿಮದಲ್ಲಿರುವ ಹಿಂದೂಗಳು ಹಾರ್ವರ್ಡ್, ರೆಡ್ ಕ್ರಾಸ್ ರೀತಿಯ ಸಂಸ್ಥೆಗಳಿಗೆ ಹಣ ನೀಡುವ ಬದಲು ಹಿಂದೂಗಳಿಗೆ ಉತ್ತಮ ಶಿಕ್ಷಣ, ಆಸ್ಪತ್ರೆ ಮತ್ತಿತರ ಸುಳಭ್ಯ ಒದಗಿಸಲು ಮುಂದಾಗಬೇಕು.
--------
ನನ್ನದು ಸಂಪೂರ್ಣ ಸಹಮತವಿದೆ. ಎಂದಿಗೂ ನಾನು, ಹಿಂದುತ್ವದಲ್ಲಿ ನಂಬಿಕೆ ಇದ್ದರೆ, ನಾವು ನಮ್ಮ ಸಂಸ್ಕೃತಿಯನ್ನು ಪಾಲಿಸಿದರೆ ಅದು ದೇಶ ಪ್ರೇಮವನ್ನು ಸೂಚಿಸುತ್ತದೆ ಎಂದು ನಂಬಿದವನು.
well, again, you can get the copy of all these articles at my site as mentioned in previous blog post, which includes today article too.. if you are so lazy to open that link.. 'todays article is here'.
ಶುಕ್ರವಾರ, ನವೆಂಬರ್ 14, 2008
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1 ಕಾಮೆಂಟ್:
"ಎಂದಿಗೂ ನಾನು, ಹಿಂದುತ್ವದಲ್ಲಿ ನಂಬಿಕೆ ಇದ್ದರೆ, ನಾವು ನಮ್ಮ ಸಂಸ್ಕೃತಿಯನ್ನು ಪಾಲಿಸಿದರೆ ಅದು ದೇಶ ಪ್ರೇಮವನ್ನು ಸೂಚಿಸುತ್ತದೆ ಎಂದು ನಂಬಿದವನು"
ಹಾಗಾದ್ರೆ ದೇಶ ಮತ್ತು ಧರ್ಮ ಒಂದೇ ಅಂತ ಆಗೋದಿಲ್ವ? ಅಥವ ಭಾರತೀಯ ಸಂಸ್ಕೃತಿಯ ಬಗ್ಗೆ ಹೇಳ್ತಾ ಇದೀಯ ಅಂದ್ರೆ ಅದಕ್ಕೆ ಹಿಂದುತ್ವ ಅಂತ ಯಾಕೆ ಹೆಸರಿಡ್ಬೇಕು. ನಾನು ಸೆಕ್ಯುಲರ್‌ವಾದಿ ಅಲ್ಲ, ಆದರೆ ಧರ್ಮ ಮತ್ತು ದೇಶ ಒಂದೇ ಅಂತ ಒಪ್ಪೋಕೆ ನಾನು ತಯಾರಿಲ್ಲ
ನನಗೂ ಸಾಕಾಗಿದೆ ಗುರು. ನನಗೂ ಗೊತ್ತು ಯಾಕೆ ಹಿಂದುಗಳು ಈ ತರ frustrate ಆಗ್ತಾ ಇದಾರೆ ಅಂತ, ಆದರೆ ನಾವು majority ಇಲ್ಲಿ ನಮ್ಮದೇ ನಡಿಬೇಕು ಅಂದ್ರೆ ಅದು ಒಳ್ಳೇದಲ್ಲ.
ಇವತ್ತು ಅಮರ್ ಸಿಂಗ್‍ನ ಮಾತು ಕೇಳಿದ್ಯಾ? ಹಿಡ್ಕೊಂಡು ಚಪ್ಪಲಿಲಿ ಹೊಡಿಬೇಕು ಅನ್ಸುತ್ತೆ.
link
ಕಾಮೆಂಟ್ ಪೋಸ್ಟ್ ಮಾಡಿ