ಸೋಮವಾರ, ಸೆಪ್ಟೆಂಬರ್ 22, 2008

ನಂದೊಂದು post ಇರ್ಲಿ

ನಾನು ಯಾವಾಗ ಬದಲಾದೆ ಗೊತ್ತಿಲ್ಲ, ಆದರೆ ಬದಲಾಗಿರೋದು ನಿಜ. ನಾನು ಇತ್ತೀಚಿಗೆ (ಸುಮಾರು ವರ್ಷಗಳಿಂದ) ಯಾವುದೇ ವಿಷಯದಲ್ಲೂ ಪ್ರಕೃತಿಯನ್ನು, ಪ್ರಕೃತಿಯ ನಿಯಮಗಳನ್ನು ನಂಬುತ್ತೇನೆ. ನನ್ನ ಪ್ರಕಾರ ದೇವರು, ಧರ್ಮ ಇವೆಲ್ಲ, ನಾವು ವಿಕಾಸವಾಗುವಾಗ ಉತ್ಪಾದನೆಗೊಂಡ sideproduct ಗಳು, ಮಾನವ ಮತ್ತೊಂದು ಪ್ರಾಣಿ, ನಮ್ಮ ತಿಳುವಳಿಕೆಗಳ ಪ್ರಕಾರ ಸ್ವಲ್ಪ ಹೆಚ್ಚಿಗೆ ವಿಕಾಸವಾದ ಒಂದು ಪ್ರಾಣಿ ಅಷ್ಟೆ. ಪ್ರಕೃತಿ ಮಾತೆಯೇ ನನಗೆ ನಿಮಗೆ ಮತ್ತು ಆ ದೇವರಿಗೂ ಮಹಾ ತಾಯಿ.

ಸರಿ ಇದೆಲ್ಲ ಪುರಾಣ ಯಾಕೆ ಅಂತಿರಾ? ಬೇಕು ರೀ!! ಈ ಬಾಂಬ್ ಬ್ಲಾಸ್ಟ್, ಒರಿಸ್ಸಾ ಗಲಾಟೆ, ಮಂಗಳೂರು ಗಲಾಟೆ, ಇತ್ಯಾದಿ ಗಳ ಮೇಲೆ ಒಬ್ರ ಮೇಲೊಬ್ರು ಅವರವರ ಇಷ್ಟ ಬಂದ ಹಾಗೆ ಹೇಳಿಕೆ ಕೊಡ್ತಾ ಇದಾರೆ, ಇಷ್ಟ ಬಂದ ಹಾಗೆ ಬರಿತಾರೆ, ಅದಕ್ಕೆ ನಂದೂ ಒಂದು ಇರ್ಲಿ ಅಂಥ ಇಷ್ಟೆಲ್ಲಾ ಪೀಠಿಕೆ.

ಅಹಿಂಸೆ ಅನ್ನೋದು ಒಂದು ಪರಿಕಲ್ಪನೆ ಅಷ್ಟೆ. ಅದು ನಿಜವಾಗಿಯು ಸರಿಯಲ್ಲ. ನಿಜ, ನನಗೂ ಶಾಂತಿ ಇರೋಅಲ್ಲಿ, ಅಹಿಂಸೆ ಇರೋ ಅಲ್ಲಿ ಬದಕೊಕೆ ಇಷ್ಟ, ಅದರೇನು ಮಾಡೋದು, ಅದು ಹಿಂದೂ ಸಾದ್ಯ ಇರ್ಲಿಲ್ಲ, ಮುಂದೂ ಸಾದ್ಯ ಇಲ್ಲ. ಯೋಚನೆ ಮಾಡಿ, ನಮ್ಮ ಮಾನವ ಜನಾಂಗ ಬರಿ 50 ರಿಂದ 100 ಕೋಟಿ ಇರೋ ಆವಾಗಲೇ ನಾವು ಶಾಂತಿ ಇಂದ ಬದಕಿಲ್ಲ, ಈಗ ಭೂಮಿ ಮೆಲಿರೋದೆಲ್ಲ ತಿಂದು ಒಂದೊಂದೇ ಪ್ರಾಣಿ ಗಳ ಗತಿ ಕಾಣಿಸಿ ನಾವು ಮಾತ್ರ 600 ಕೋಟಿಗೂ ಮಿಗಿಲಾಗಿ ಬೆಳೆದು, ಇರೋ ಬರೋ ಶಕ್ತಿ ಮೂಲಗಳೆಲ್ಲ ಖಾಲಿ ಆಗುತ್ತಾ ಬಂದಾಗ, ಶಾಂತಿ ಇಂದ ಇರಲಿಕ್ಕೆ ಸಾದ್ಯಾನ? ಪ್ರಕೃತಿ ನಿಯಮದಂತೆ 'survival of fittest', ಯಾರು ಬಲಶಾಲಿಗಳೋ ಅವರಿಗೆ ಜಯ. ಅದು ಒಂದು ಧರ್ಮ ಇರ್ಬೋದು, ಭಾಷೆ ಇರ್ಬೋದು, ದೇಶ ಇರ್ಬೋದು, ಅಥವಾ ಒಬ್ಬ ಸಾಮನ್ಯ ಮನುಷ್ಯನೆ ಇರ್ಬೋದು. (ಬಲಶಾಲಿ ಅನ್ನೋದನ್ನ ನಿರ್ದರಿಸೋ ಬಗೆ ಬೇರೆ ಬೇರೆ ಇರಬಹುದು, ಎಷ್ಟು ಜನ ಉಪಯೋಗಿಸುತ್ತಾರೆ (ಭಾಷೆಗೆ), ಎಷ್ಟು ಜನ ನಂಬುತ್ತಾರೆ(ಧರ್ಮಕ್ಕೆ), ಎಷ್ಟು ಜನಸಂಖ್ಯೆ ಅಥವಾ ಎಷ್ಟು ನೈಸರ್ಗಿಕ ಸಂಪತ್ತು ಇದೆ (ದೇಶಕ್ಕೆ), ಎಷ್ಟು ದುಡ್ಡಿದೆ ಅಥವಾ ಆರೋಗ್ಯ (ಒಂದು ಜೀವಿಗೆ)).

"ದಿನ ಸಾಯುವವರಿಗೆ ಅಳುವವರು ಯಾರು" ಅನ್ನೋ ಗಾದೆ ಮಾತಿನಂತೆ ಸಾವಿಗೆ/ಹಿಂಸೆಗೆ ನಾವೆಲ್ಲ ಎಷ್ಟು ಒಗ್ಗಿ ಹೋಗಿದಿವಿ. ಬಾಂಬ್ ಬ್ಲಾಸ್ಟ್ ಆಗುತ್ತೆ, ಮರುದಿನ ಎಲ್ಲರೂ ಕಿರ್ಚ್ಕೊತಾರೆ, ಅದರ ಮರುದಿನ ಎಲ್ಲರೂ ಅವರವರ ಕೆಲಸಕ್ಕೆ ಹಾಜರ್. ಬಾವನೆಗಳು ಹೊಟ್ಟೆ ತುಂಬ್ಸೋಲ್ವಲ್ಲ! ಈ ರಾಜಕಾರಣಿ ಗಳಿಗೆ ಬೇರೆ ಕೆಲಸ ಇಲ್ಲ, ಯಾರೋ ಸತ್ರೆ ಅಲ್ಲಿ ಹೋಗಿ ಪ್ರೆಸ್ ತೆಗೆಯೋ ಫೋಟೋಕ್ಕೆ ಪೋಸ್ ಕೊಟ್ಟು, ಸರ್ಕಾರ ರಾಜಿನಾಮೆ ಕೊಡ್ಬೇಕು ಅಂತ ಒಂದು ಹೇಳಿಕೆ ಕೊಟ್ಟು, ಅಲ್ಲಿ ಒಂದು ಬಂದ್ ಮಾಡ್ಸಿ, ಗಲಾಟೆ ಮಾಡ್ಸಿ, ಬದಕಿರೋ ಜನ ಸಾಮಾನ್ಯರಿಗೂ ಹಿಂಸೆ ಕೊಟ್ಟು, ವಾಪಸ್ ಮನೆಗೆ ಹೋಗಿ ಸೊಂಪು ತಿಂದು, ಗಡದ್ದಾಗಿ ನಿದ್ದೆ ಹೊಡಿತಾರೆ. ಇವರೇ ಸರ್ಕಾರ ನೆಡ್ಸ್ತ ಇದ್ರೆ ಉಸ್ರು ಹೊರಡ್ತಾ ಇರ್ಲಿಲ್ಲ ಗಲಾಟೆಗಳಾಗಿದ್ರೆ. ಅಬ್ಬಬ್ಬ ಅಂದ್ರೆ ನಮ್ಮ ಬಡಪಾಯಿ ಪೋಲಿಸ್ ಇಲಾಖೆ ಅವ್ರು ಕೆಲವೊಬ್ರು ಸ್ವಲ್ಪ ದಿನ 'suspension' ನಲ್ಲಿ ಹೋಗಬೇಕಾಗುತ್ತೆ ಅಷ್ಟೆ. ಈ ಬಂದ್, ಈ ಚುನಾವಣೆ, ಇವೆಲ್ಲ ನಮ್ಮಂತ ಕಂದಾಯ ಕಟ್ಟೋ ಅವರ ದುಡ್ಡನ್ನು ಪೋಲು ಮಾಡುವ ಕೆಲಸ ಅಂಥ ಅವರಿಗೆ ಅನಿಸೋದೇ ಇಲ್ಲ.

ಎಲ್ಲರೂ ಬರಿ ಅವರವರ ಸ್ವಂತಕ್ಕೆ ನೋಡಿಕೊಳ್ಳುವವರೇ, ಪ್ರಾಣಿಗಳ ತರಹ.

ನಾನು ಹೊಡೆದಾಟಗಳನ್ನು ತುಂಬ ಹತ್ತಿರದಿಂದ ನೋಡಿದ್ದೇನೆ. ದೂರದಲ್ಲಿ ಬರಿ ನಿಂತು ನೋಡಿ ಮಜಾ ತಗೊಳೋಅವರಿಗೆ ಎಷ್ಟು ಕುಲ್ಲಕ ಕಾರಣ ಅನಿಸುತ್ತೆ, ಹೊಡೆದಾಟ ಮಾಡುತ್ತಿದ್ದವರಿಗೆ ಅದು ಅಳಿವು ಉಳಿವಿನ ಪ್ರಶ್ನೆ ಆಗಿರಬಹುದು. ಹೇಳೋದು ಬಹು ಸುಲಬ, "ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ಚಾಚು" ಅಂಥ. its sooo unnatural ಅನ್ಸೊಲ್ವಾ? ನಾನೆ ಆದರೆ ತಿರಗಿ ಎರಡೂ ಕೆನ್ನೆಗೆ ಬಾರಿಸ್ತಿನಿ. ನನ್ನ ಪ್ರಕಾರ 100 ಕ್ಕೆ 99 ಜನ ವಾಪಸ್ ಹೊಡಿತಾರೆ. ಇನ್ನೊಬ್ಬನಿಗೆ ಕೈಲಿ ಆಗೋಲ್ಲ ಅದಕ್ಕೆ "ನಾನು ಗಾಂಧಿವಾದಿ" ಅನ್ನುತ್ತಾನೆ ಅಷ್ಟೆ.

"ಏನೋ ಮಗನೆ, ಹಿಂಸೆಗೆ ಪ್ರಚೋದನೆ ಕೊಡ್ತಾ ಇದ್ದೀಯ?" ಅಂತ ನೀವು ಕೇಳಿದರೆ, ನನ್ನುತ್ತರ "ಇಲ್ಲ, ಆದರೆ ಹಿಂಸೆ ನಮ್ಮ ಜೀವನದ ಅವಿಬಾಜ್ಯ ಅಂಗ, ನಾವೇ ಕಂಡು ಹಿಡಿದ ಗನ್/ಬಾಂಬ್ ಇದೆ, ಅದಕ್ಕೆ ಅದು ಉಪಯೋಗಿಸಲ್ಪಡುತ್ತಿದೆ, ಇಲ್ದೆ ಹೋದ್ರೆ, ಕತ್ತಿ, ಖಡ್ಗ, ಕಲ್ಲು, ಮುತದವು ಗಳಲ್ಲೇ ಹೊಡದಾಡ್ತಿದ್ವಿ. ಪ್ರತಿಯೊಬ್ಬರು ಅವರವರ ಆಸ್ತಿತ್ವಕ್ಕೆ, ಅವರವರ ನಂಬಿಕೆಯ ಉಳಿವಿಗೆ ಹೊಡೆದಾಡಲೇ ಬೇಕು". ನನಗೆ ಭಾರತ ಇಷ್ಟ, ಬೇರೆ ಎಲ್ಲ ದೇಶಗಳು ನನಗೆ ಪರದೇಶವಾಗೆ ಇರುತ್ತದೆ. ಅಂತೆಯೇ, ಯಾವತ್ತಿಗಾದರು ಭಾರತದ ಮೇಲೆ ಯಾರೋ ಯುದ್ದ ಮಾಡಿದರೆ, ನಾನು ಹೊಡೆದಾಡಲು ತಯಾರು, ಯಾಕೆಂದರೆ ನಾನು ಹುಟ್ಟಿದಾಗಿನಿಂದ ಭಾರತಾಂಬೆ, ಭಾರತ ಮಾತೆ ಎಂದು ಓದಿದ್ದೇನೆ, ಅಮ್ಮನ ರಕ್ಷಣೆಗೆ ನಾನು ಸಿದ್ದ. ಅಂತೆಯೇ ನನ್ನ ಬೇರೆ ಹಲವಾರು ನಂಬಿಕೆಗಳು. ನನ್ನ ರೀತಿಯೇ ಪಾಕಿಸ್ತಾನದ ಪ್ರಜೆ ಕೂಡ ಅವನ ದೇಶದ ಬಗ್ಗೆ ಈ ಬಾವನೆ ಗಳನ್ನು ಹೊಂದಿರುತ್ತಾನೆ. ಅದೂ ಕೂಡ ತಪ್ಪಲ್ಲ. its so natural that animals will have affinity to where they belong. ಅಲ್ಲಿ ಧರ್ಮ ಕೂಡ ಕೆಲ್ಸಕ್ಕೆ ಬರಲ್ಲ.. ನಾವು ಒಂದೊಂದು ಧರ್ಮ ಪಾಲಿಸಬಹುದು, ಆದರೆ ಅದರಲ್ಲಿ ಏನು ಹೇಳಿದೆ ಅನ್ನೋದು ಮುಖ್ಯ ಆಗೋದೇ ಇಲ್ಲ, ನಾವು ಏನು ಅನ್ಕೊತಾ ಇದಿವೋ ಅದು ಮುಖ್ಯ ಆಗುತ್ತೆ. ನನ್ನ ಪ್ರಕಾರ ಭಾರತ ಒಂದು ದೇಶ ಆಗಿರೋದಕ್ಕೆ ಕಾರಣ ಹಿಂದೂ ಧರ್ಮ, ಆದ್ದರಿಂದ ನನಗೆ ಅದು ಮುಖ್ಯ ಆಗುತ್ತೆ. ಅದಿಲ್ಲ ಅಂದ್ರೆ ಯಾರೋ ಉತ್ತರ ಪ್ರದೇಶದಲ್ಲಿ ಇರೋ ಒಬ್ಬ ನನಗೆನಾಗ ಬೇಕು? ನನಗೆ ಹಿಂದಿ ಬರಲ್ಲ, ಅವನಿಗೆ ಕನ್ನಡ ಬರಲ್ಲ, ನನ್ನ ಮನೇಲಿ ಆಚರಿಸೋ ಹಬ್ಬಗಳೇ ಬೇರೆ, ಅವನ ಸಂಸ್ಕೃತಿನೆ ಬೇರೆ. ಆದರೆ ನಾವು ಒಂದಾಗಿರೋಕ್ಕೆ, ಬೇರೆ ದೇಶಕ್ಕೆ ಬಂದಾಗ ಅವನು ಬಾರತೀಯ ಅನ್ನೋಕೆ, ಹಿಂದೂ ದರ್ಮ ಕಾರಣ. now don't tell me that because british ruled us for 100+ years we became one country, thats a joke, british ruled 20-30 more such countries, why didn't we all become one country called UQ (under queen) country? ಇದು ನನ್ನ ದಿಟ್ಟ ನಂಬಿಕೆ. ಕಾಶ್ಮೀರದಲ್ಲಿ ಸ್ವಲ್ಪ ಭೂಮಿ ವಿಚಾರಕ್ಕೆ ಗಲಾಟೆ, ಸುಮ್ನೆ ಯಾಕೆ ಬೇಕು, ಅಲ್ಲಿ ಜನರಿಗೆ ಬಿಡಬೇಕು ಅವರ ವಿಚಾರನ ಅಂಥ ಕೆಲವೊಬ್ರು ಹೇಳೋದು ಕೇಳ್ದೆ. ಎಂಥಾ ತಮಾಷೆ, ಭಾರತ ಸ್ವಾತಂತ್ರ ಸಂಗ್ರಾಮ ಯಾಕಾಯ್ತು? ಕಾರ್ಗಿಲ್ ಯುದ್ದ ಯಾಕೆ ಬೇಕಿತ್ತು? "ಸ್ವಲ್ಪ ಭೂಮಿ ತಾನೆ, ಸುಮ್ನೆ ಕೊಡ್ಬೋದಿತ್ತು. ಚೀನಾ ಜೊತೆ ಯಾಕೆ ಗಲಾಟೆ, ಏನೋ ಸ್ವಲ್ಪ ಗಡಿ ಈ ಕಡೆ ಅವ್ರು ಬಂದು ಬಿಟ್ಟಿದಾರೆ, ಏನೋ ಸ್ವಲ್ಪ adjust ಮಾಡ್ಕೊಳೋಣ, ಅವ್ರಿಗೆ ಬಿಟ್ಟು ಬಿಡಿ, ಬೆಳಗಾವಿಲಿ ಯಾಕ್ರೀ ಹೊಡೆದಾಟ, ಬರಿ ಒಂದು ಜಿಲ್ಲೆ ಅವ್ರಿಗೆ ಬೇಕಂತೆ, ಕೊಡ್ರಿ". ನಾನು ಒಪ್ಪಲ್ಲ. ಈ ಎಲ್ಲ ಜಾಗಗಳ ಬಗ್ಗೆ ನನಗೆ ಒಂದು ಒಲವಿದೆ. ಆ ಒಲವಿಗಾಗಿ ನನ್ನ ಬೆಂಬಲ ಇದೆ. ಅದೇ ರೀತಿ ನನ್ನ ಬೆಂಬಲ ಹಿಂದೂ ದರ್ಮಕ್ಕಿದೆ. ನನಗೆ ಗೊತ್ತು, ಈ ಜಾತಿ ದರ್ಮ ದೇಶ ಎಲ್ಲ ನಾವೇ ಮಾಡಿಕೊಂಡ ಒಂದು ನಿಯಮ ಅಂತ, ಅವೆಲ್ಲ ಬಿಟ್ಟು ಬಿಟ್ರೆ ಜೀವನದಲ್ಲಿ ಇನ್ನೇನಿದೆ, ದಿನ ಬೆಳ್ಳಿಗ್ಗೆ ಏಳು, ತಿನ್ನು, ದುಡಿ, ತಿನ್ನು, ಅವಕಾಶ ಆದ್ರೆ ಬೇರೆ ಗೆಳೆಯರನ್ನ ಬೇಟಿ ಆಗು, ತಿನ್ನು, ಕುಡಿ, (ಅವಕಾಶ ಆದ್ರೆ, ಮದುವೆ ಆಗಿದ್ರೆ, ಮತ್ತೊಂದು ಜೀವಿಯ ಜೊತೆ) ಮಲಗು. ಇದು ಬೇರೆ ಯಾವುದೇ ಸಸ್ತನಿ ಪ್ರಾಣಿಯ ದಿನಚರಿಯಿಂದ ಏನು ವ್ಯತ್ಯಾಸ??

ಅದಕ್ಕೆ ನನಗೆ ಮತಾಂತರ ತಪ್ಪು ಅನಿಸುತ್ತೆ, ಇಸ್ಲಾಂ ಮುಲಬೂತವಾದ ಇಷ್ಟ ಆಗೋಲ್ಲ. ಇನ್ನೂ ನೂರು, ಇನ್ನೂರು, ಸಾವಿರ ವರ್ಷಗಳ ಕಾಲ ಭಾರತ ಭಾರತವಾಗೆ ಇರಬೇಕು ಅಂದ್ರೆ ಇವು ನಿಲ್ಲಬೇಕು, ಹಿಂದೂ ಧರ್ಮ ಗಟ್ಟಿಯಾಗ ಬೇಕು. ಇದು ನನ್ನ ಸದ್ಯದ ಅಚಲ ನಂಬಿಕೆ. ಯಾವತ್ತಿಗೂ ನಾನು ತಿಳಿದವರ ಮಾತುಗಳ ಬಗ್ಗೆ ಗೌರವದಿಂದ ನೋಡಿದ್ದೇನೆ, ನಿಮ್ಮ ಅನಿಸಿಕೆ ತಿಳಿಸಿ, ನನ್ನ ತಪ್ಪಿದ್ದರೆ, ಮೊದಲೇ ದಡ್ಡ ಶಿಕಾಮಣಿ ನಾನು, ಕಲಿತು ಕೊಳ್ಳಲು ಆದರೆ ತಿದ್ದಿಕೊಳ್ಳುತ್ತೇನೆ.

[ಸಶೇಷ]

1 ಕಾಮೆಂಟ್‌:

Harish - ಹರೀಶ ಹೇಳಿದರು...

ಸಶೇಷ ಅಂತ ಹಾಕಿದೀರಲ್ಲ.. ಶೇಷ ಯಾವಾಗ? ಬೇಗ ಬರೀರಿ..