ಒಂದ್ ತಿಂಗ್ಳಾತು, ಆಪಿಸಗೆ ಬರ್ತಿ ಕೆಲ್ಸ. ಇತ್ಲಗೆ ಮೊದ್ಲಂಗೆ ಹುಡ್ಗಾಟ್ಗೆ ಗಿಡ್ಗಾಟ್ಗೆ ಮಾಡಹಂಗೂ ಇಲ್ಲೆ. ಇದೇ ಹೆಳೆಲಿ ಸಣ್ಣಕ್ಕಿದ್ದಾಗಿನ್ ನೆನ್ಪು ತಲೇಲಿ ಗಿರ್ಕಿ ಹೊಡಿತಾ ಬಿದ್ದಿರ್ತ.
ಗಟ್ಟ ಹತ್ತಿ, ಅಗಳ ಹಾರಿ ಕಬ್ಬಿನ್ ಹಾಲು ಕುಡಿಯಲೆ ಗುಬ್ಗೋಡ್ಬದಿಗೆ ಹೋಗಿ ಬತ್ತಿದ್ಯ. ಹಂಗೆಯ ಯೆಮ್ಮನೆ ಅಂಗ್ಳ ದಾಟಕ್ಕಿದ್ರೆ 'ದೊಣಕ್ಲು ತೆಕ್ಕಂಡು ಹೋಗ ಮಾಣಿ' ಹೇಳಿರು ಕೇಳ್ದೆ ಕಂಕ್ಣಕ್ಕೆ ಕೈ ಕೊಟ್ಟು ಹಾರ್ಯೆ ಹೋಗ್ತಿದ್ದಿ. ಕೊನೆಕೊಯ್ಲು ಹೊತ್ತಗೆ ಅಟ್ಟದ್ ಮೇಲಿಂದ ಕೆಳಗಿದ್ದ ಮರ್ಳು ಗುಪ್ಪೆ ಮೇಲೆ ಹಾರದು ಒಂದು ಆಟಾಗಿತ್ತಪ. ಅದೂ ಕೊನೆಕೊಯ್ಲು ಅಂದ್ರೆ ಒಳ್ಳೆ ಚಳಿಗಾಲ, ಅಡ್ಕೆ ಬೇಯ್ಸಕ್ಕಿದ್ರೆ ಓಲೆ ಮುಂದೆ ನಾ ಹಾಜರ್. ಒಳ್ಳೊಳ್ಳೆ ಹಾಳೆಸಿಪ್ಪೆ, ಕಾಯ್ಸಿಬ್ಲು ಒಲಿಗೆ ಕೂಡಿಕ್ಕೆ ಹೊಗೆ ಮದ್ಯಕ್ಕೆ ಸಣ್ಣಕ್ಕೆ ಉಸ್ರಾಡ ಬೆಂಕಿಲಿ ಮೈ ಕಾಸ್ಕೊತ ಬಾಲಮಂಗಳ, ಚಂದಮಾಮ, ಅಥ್ವ ಅದೇ ಥರದ್ ಪುಸ್ತ್ಕ ಕೈಲಿ ಹಿಡ್ಕಂಡು ಕುತ್ಕಂಡ್ರೆ ಯೆಮ್ಮೂರ್ ಹೆಂಗುಸ್ರು ಹೇಳ ಸುದ್ದಿ ಕಿವಿಗೇ ಬಿಳ್ತಿರ್ಲೆ.
ರಾತ್ರೆ ಎಲ್ಲರೂ ಡಬ್ಬ, ಗಿದ್ನ, ಕೊಳ್ಗ ಹೇಳಿ ಅಡ್ಕೆ ಅಳ್ದಿಕ್ಕೆ ಮನಿಗೆ ಹೋದ್ಮೇಲೆ ನಂಗ ನಿದ್ದೆ ಮಾಡದಾಗಿತ್ತು. ನಂಗೆ ಯಾವ್ ತಲೆನೋವಗಾರು, ಎಂತ ಹೊತ್ತಗಾರು ಕೂಡ ನೆನಪಲ್ಲಿ ಬಂದು ಖುಷಿ ಕೊಡ ಒಂದು ವಿಚಾರ ಅಂದ್ರೆ ಕೊನೆಕೊಯ್ಲು.
ನಮ್ ಹುಡ್ಗ್ರು ಆಪಿಸಿಗೆ ಬರ ಹೊತ್ತಾತು, ಮತ್ಯಾವಾಗ್ಲಾದ್ರು ಬರಿತಿ.. ಸದ್ಯಕ್ಕೆ ಹೋಗ್ಬತ್ತಿ

2 ಕಾಮೆಂಟ್‌ಗಳು:
ಯಂಗು ಕೂಡ ಆ ಅಡಿಕೆ ಕೊಯ್ಲು ನೆನಪಾಗ್ತು . ಎಸ್ಟೋ ತಿಂಗಳಿಂದ ಊರಿನ ಕಡೆಗೆ ಹೋಗಕ್ಕೆ ಅಗಲ್ಲೇ, ಬಹುಷಃ ನಾನು ನನ್ನ ನಿಜ ಜೀವನವನ್ನು ಹಳ್ಮದ್ಕತ್ತ ಇದ್ದಿ ಕನ್ಸ್ತು. ಯಾಕೆ ಅಂದ್ರೆ ಇಲ್ಲಿ ಕೆಲಸ ದಲ್ಲಿ ಮನಶಾಂತಿ ನು ಇಲ್ಲೇ, ಇತ್ಲತೆ ಊರಿನ ಕಡೆಗೂ ಹೋಗ್ತಾ ಇಲ್ಲೇ.
ಮೊನ್ನೆ ಅತ್ಲಾಗ್ ಊರಿಗೆ ಹೋಗಿದ್ದಿ, ಅನಿವಾರ್ಯವಾಗಿ ಕೊನೆಕೊಯ್ಲಲ್ಲಿ ಕೆಲ್ಸ ಮಾಡಾಂಗಾತು ನೋಡು, ತುಂಬಳ್ಳಿ, ಕೊನೆಹಗ್ಗ ಹಿಡದು ಭುಜ ಎಲ್ಲ ಸೆಣತ್ ಹೋತು, ಚೂಳಿಲಿ ಕೊನೆ ಹಾಯ್ಕಂಡು ಹೊತ್ತೆ ನೋಡು ನೆತ್ತಿನೇ ಬಾಯ್ಬಿಟ್ಟಾಂಗಾತು,
ಕಡಿಗೆ ಸಂಜೆ ವರೆ ಎಂಥದು ಬೇಡ.
ಶ್ರೀಕಾಂತ ಹೆಗಡೆ
ಕಾಮೆಂಟ್ ಪೋಸ್ಟ್ ಮಾಡಿ