ಮೊನ್ನೆ ಮೊನ್ನೆ ಪರಿಸರಪ್ರೇಮಿಗಳು ಕಗ್ಗ ಸಂಘ orkut ನಲ್ಲಿ ಶುರು ಮಾಡಿದಿವಿ, ಓದಿದ್ರೆ ಸೇರ್ಕೊಳ್ಳಿ ಅಂತ ಹೇಳಿದ್ರ, ಆಗ ಅನ್ಸಿದ್ದು, ಕಗ್ಗದ ಬಗ್ಗೆ ಡಿವಿಜಿ ಯವರ ಬಗ್ಗೆ ಬರೀಬೇಕು ಅಂತ. ಅದು ಬೇರೆ ಈ ಮುಗಿಯದ ಹೊಡೆದಾಟಗಳ series ನೋಡ್ತಾ ಇದ್ದರೆ ಬರಿಬೇಕು ಅಂತ ಸುಮಾರು ಸಲ ಅನ್ಕೊಂಡೆ.
ಕಗ್ಗ ಓದುವಾಗ (ನಾನು ಓದಿದ್ದು ಬಾವರ್ಥ ಸಹಿತ ಪುಸ್ತಕ) ಅನ್ಕೊತಿದ್ದೆ, ಇವ್ರು ಯಾಕೆ ಈ ತರ ಅರ್ಥೈಸಿದ್ದಾರೆ, ಬೇರೆ ತರನು ಅರ್ಥ ಬರುತ್ತಲ್ಲ ಅಂತ. ಕಗ್ಗದಲ್ಲಿ ಕೂಡ ಇದನ್ನೇ ಹೇಳೋದು. ಪ್ರಪಂಚದಲ್ಲಿ ಇದೇ ಸರಿ, ಅದು ತಪ್ಪು ಅನ್ನೋದು ಏನೂ ಇಲ್ಲ.. ಅವರವರ ಬಾವಕ್ಕೆ, ಅವರವರ ಅನುವಬಕ್ಕೆ ತಕ್ಕಂತೆ ಒಂದೇ ವಿಚಾರವನ್ನ ಬೇರೆ ಬೇರೆ ತರನಾಗಿ ಅರ್ಥೈಸಿಕೊಳ್ಳುತ್ತಾರೆ. ದಿನ ಕಳೆದಂತೆ ಅದು ಎಷ್ಟು ನಿಜ ಅನ್ನೋದು ದಿಗ್ಗೊಚರವಾಗ್ತಾ ಇದೆ.
ನೀವು ಎಷ್ಟೇ ಹೇಳಿ, ಈ ಬುದ್ದಿಜೀವಿಗಳು ಹಿಂದೂಪರ ಸಂಘಟನೆಗಳನ್ನ 'ಬಯೋದ್ಪಾದಕರು' ಅನ್ನೋದು ಬಿಡೋಲ್ಲ, ಹಾಗೆ ಅಲ್ಪಸಂಖ್ಯಾತರು ಏನೆ ಮಾಡಿದರು ಅದು ಅವರ ಹಿರಿತನ ಅಂತಾರೆ. ಅದೇ ಒಬ್ಬ ಸಾಮಾನ್ಯ ನಾಗರೀಕ ಹಾಗೆ ಅನ್ಕೊಳೊಲ್ಲ. ಏನು ಮಾಡೋಕ್ಕೆ ಆಗೋಲ್ಲ, ಅವರವರ ಬುದ್ದಿ ಮಟ್ಟಕ್ಕೆ ಅವರವರ ಆಲೋಚನೆಗಳು, ಹೇಳಿಕೆಗಳು. ಸುಮಾರು ಜನರಿಗೆ ಬುದ್ದಿವಂತಿಕೆ ಬಂದಾಗ ಸಾಮಾನ್ಯ ಜ್ಞಾನ ಗೊತ್ತಿಲ್ದೆ ಇದ್ದಂಗೆ ಬಿಟ್ಟು ಹೋಗಿರುತ್ತೆ. ಅವರು ಒಪ್ಪಿಕೊಳ್ಳಲು ತಯಾರಿರುವುದಿಲ್ಲ.
ಒಂದು ಗಂಬೀರ ಸಮಸ್ಯೆ ತೆಗೆದು ಕೊಳ್ಳೋಣ. ನಿಮ್ಮ ಹೃದಯದಿಂದ ಬಂದ ಅನಿಸಿಕೆಯನ್ನ ತಿಳಿಸಿ.
ಘಟನೆ:
ಒಬ್ಬಳು ನಾಲ್ಕನೆ ಇಯತ್ತೆ ಅಥವಾ ಐದನೇ ಇಯತ್ತೆಯಲ್ಲಿ ಓದುವ ಹುಡುಗಿ. ಮುಗ್ದ ಮಗು. (ನಮ್ಮಲ್ಲಿ ಆ ವಯಸ್ಸಿಗೆ ಲೈಂಗಿಕ ಶಿಕ್ಷಣ ಇಲ್ಲ). ಒಂದು ದಿನ ಮದ್ಯಾನ್ಹ ಶಾಲೆ ಮುಗಿಸಿ ಮನೆಗೆ ಬರುವಾಗ ಇಬ್ಬರು - ಮೂರು ಜನರ ಹುಡುಗರ ಗುಂಪು ಆಕೆಯ ಮೇಲೆ ಅತ್ಯಾಚಾರ ಮಾಡುತ್ತೆ.
* ಆ ಬಾಲೆ ನಿಮ್ಮ ಮಗಳು/ತಂಗಿ/ಮೊಮ್ಮಗಳು ಆಗಿದ್ದರೆ,
* ಅವಳು ನಿಮ್ಮ ನೆಂಟರಿಷ್ಟರ ಪೈಕಿ
* ಆ ಬಾಲೆ ನಿಮ್ಮ ಊರಿನವಳು
* ಆ ಬಾಲೆ ಗೊತ್ತಿಲ್ಲ, ಆದರೆ ಅವರ ಮನೆಯವರು ಗೊತ್ತು, ಪಾಪದ ಜನ.
* ಆ ಬಾಲೆ ನಿಮ್ಮ ಜಾತಿ, ಪಂಗಡ, ದರ್ಮದವಳು.
* ಆ ಹುಡುಗರಲ್ಲಿ ಒಬ್ಬ ನಿಮ್ಮ ಮಗ/ತಮ್ಮ/ಮೊಮ್ಮಗ
* ಆ ಹುಡುಗರಲ್ಲಿ ಒಬ್ಬ ನಿಮ್ಮ ನೆಂಟರಿಷ್ಟರ ಪೈಕಿ.
* ಆ ಹುಡುಗ ಪಕ್ಕದ ಊರಿನವನು
* ಆ ಹುಡುಗ ಬೇರೆ ಜಾತಿ, ಪಂಗಡ, ದರ್ಮದವನು.
ಇವೆಲ್ಲ ಪರಿಸ್ಥಿತಿಯಲ್ಲಿ ನಿಮ್ಮ ಬಾವನೆಗಳು ಏನಿತ್ತು? ಏನಿವೆ?
ನನ್ನ ಬಗ್ಗೆ ಹೇಳಬೇಕು ಅಂದ್ರೆ, ಈ ಘಟನೆ ತಪ್ಪು, ಬಲಾತ್ಕಾರ ಯಾವತ್ತಿಗೂ ತಪ್ಪೇ. ಮಾಡಿರುವವರು ನನ್ನ ಪರಿಚಯದವರಾದರೆ ಅಂದಿಗೆ ಅದಕ್ಕೆ ತಿಲಾಂಜಲಿ, ಅಷ್ಟೆ ಅಲ್ಲ, ಅವರಿಗೆ ನಾಲಕ್ಕು ಬಾರ್ಸ್ ಬೇಕು ಅನ್ನೋವ್ನು ನಾನು. ಅವನನ್ನ ಬೆಂಬಲಿಸುವರಿದ್ರೆ ಅವರಿಗೂ ನಂಗು ಅವತ್ತಿಗೆ ನಂಟು ತಪ್ಪುತ್ತೆ.
ಅದೇ ಆ ಹುಡುಗಿ ನನಗೆ ಯಾವುದೇ ರೀತಿಯಲ್ಲಿ ಸಂಬಂದಿಕಳಾದರೆ, ಅಥವಾ ಪರಿಚಯ ಇದ್ದವರ ಮನೆಯವಳಾದರೆ, ನನ್ನ ಪ್ರಕಾರ ಆ ಹುಡುಗ ಕೈಗೆ ಸಿಕ್ರೆ ಬೀಜ ಒಡಿಬೇಕು ಅನ್ನೋವ್ನು ನಾನು. ಅಲ್ಲ, ಹೋರಿ ಬೇಲಿ ಹಾರ್ತು ಅಂತ ಅದ್ರ ಬೀಜ ಒಡಿತ ಜನ, ಮನುಷ್ಯರಿಗೆ ಯಾಕೆ ಮಾಡ್ಲಾಗ? ಜನಸಂಖ್ಯೆ ಅಂತು ಬೇಕಾದಷ್ಟು ಇದ್ದು, ಇವ್ರ ಬೀಜ ದಿಂದ ಹುಟ್ಟೋಅವ್ರು ಹುಟ್ಟದೆ ಇದ್ರೆ ಒಳ್ಳೇದು. ಸತ್ರೆ ಸತ್ತ ಬೊ__ಮಗ.
ಒಹ್! ಇದಕ್ಕೆಲ್ಲ ಕಾನೂನಿದ್ದು ಅಂತ ನಿಂಗ ಹೇಳ್ತ್ರ? ಶಾ__! ಆ ಹುಡುಗ ಡ್ರಗ್ಸ್ ತಗಂಡಿದ್ದ, ಅಮಲಗಿದ್ದಿದ್ದ, ಅದಕ್ಕೆ ಅವನ ತಪ್ಪಲ್ಲ, ಅದು ಮಾದಕ ವಸ್ತುವಿನ ತಪ್ಪು ಅಂತ ಬಂದಿಖಾನೆ ಇಂದ ಹೊರಗೆ ಬತ್ತ. ಆಗ ಎ೦ತ ಹೇಳ್ತೆ?
"ಆ ಬಾಲೆ ನಿಮ್ಮ ಜಾತಿ, ಪಂಗಡ, ದರ್ಮದವಳು. ಆ ಹುಡುಗ ಬೇರೆ ಜಾತಿ, ಪಂಗಡ, ದರ್ಮದವನು." <- ಈ ಒಂದು ವಿಚಾರ ಸಾಕು ಜಾತಿ/ಕೋಮು ಗಲಬೆಗಳಾಗಕ್ಕೆ. ಅದೇನಾದ್ರೂ ಅಪ್ಪಿ ತಪ್ಪಿ ಆ ಹುಡುಗನ ಕಡೆ ಅವ್ರು ಅವನು ಮಾಡಿದ್ದು ಬಹು ಗಂಡಸ್ತನದ ವಿಚಾರ, ಅವನ ಮೈ ಮುಟ್ಟಬೇಡಿ ಅಂದ್ರೆ, ರಣ ಹೊಡದಾಟನಲ.
ಯಾಕೋ ಕಾಶ್ಮೀರಿ ಪಂಡಿತರು ನೆನಪಾಗ್ತಾರೆ. ಅಲ್ಲಿ ಅಕ್ಕ/ತಂಗಿಯರು ಮನೆಮಂದಿಯ ಎದುರೆದರೆ ಅತ್ಯಾಚಾರಕ್ಕೆ ಒಳಗಾದಾಗ, ನೋಡುತ್ತಿದ್ದ ಅಣ್ಣ ತಮ್ಮಂದಿರ ಕೋಪ ನೆನಪಾಗುತ್ತೆ. ಕೋಪ ಇದ್ರೂ ಎದುರು ಬಂದೂಕು ಹಿಡಿದು ನಿಂತ ಜನರ ವಿರುದ್ದ ಏನೂ ಮಾಡಲಾಗದೆ ಹೋದ ಅವರ ಅಸಹಾಯಕತೆ ನೆನಪಾಗುತ್ತೆ. ಹೋಗಲಿ ಕಾನೂನಾದ್ರು ಅವರಿಗೆ ಸಹಾಯ ಮಾಡ್ತಾ ಅಂದ್ರೆ ನಮ್ಮ ಭಾರತದ ಸರ್ಕಾರ ಅಲ್ಪಸಂಖ್ಯಾತರಿಗೆ ನೋವಾಗ ಬಾರದು ಅಂತ ಸುಮ್ನೆ ಇದ್ದಿದ್ದು ನೆನಪಾಗುತ್ತೆ. ನಮ್ಮ ಮಾದ್ಯಮದವರು ಸೋಲ್ಲೆತ್ತದಿರೋದು ನೆನಪಾಗುತ್ತೆ.
ಕಾಶ್ಮೀರ ನಮ್ಮೂರಿಂದ ದೂರ ಇದೆ ಅಂದ್ರೆ ಸಾಗರದಲ್ಲಿ ಒಬ್ಬ ಮುಸ್ಲಿಂ ಹುಡುಗ ಹವ್ಯಕ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ ಅನ್ನೋ ಸುದ್ದಿ ನನಗೆ ನಿದ್ದೆ ಕೆಡಿಸುತ್ತೆ. ನಾನು ಅಹಿಂಸಾವಾದಿಯಾಗಿರಲು ಸಾದ್ಯನೇ ಇಲ್ಲ ಅನಿಸುತ್ತೆ. ಅದೂ ಆ ಹುಡುಗ ಏನೇನೊ ತಿಂದು ಕುಡಿದು ಚಿತ್ತಾಗಿದ್ದೆ, ನನಗೇನು ಗೊತ್ತಿಲ್ಲ ಅಂತ ಹೇಳಿದ ಎ೦ದು ಗೊತ್ತಾದ ಮೇಲೆ ಇನ್ನೂ ಕೋಪ ಬರುತ್ತೆ.
ಏನೋ! ನಾನೊಬ್ಬ ಸಾಮಾನ್ಯ ಮನುಷ್ಯ. ಹಿಂಸೆ ಇಷ್ಟ ಇಲ್ಲ. ಆದರೆ ನನ್ನ ಅಸ್ತಿತ್ವಕ್ಕೆ ದಕ್ಕೆ ಬಂದ್ರೆ ಯಾವುದೇ ರೀತಿಯಲ್ಲಾದರೂ ಉಳಿಸಿಕೋ ಅಂತ ನನ್ನ ಅಂತರಾತ್ಮ ನನಗೆ ಹೇಳುತ್ತೆ. ನಿಮಗೆಲ್ಲ ನಿಮ್ಮ ಆತ್ಮ ಏನು ಹೇಳುತ್ತೆ ಅಂತ ನನಗೆ ಹೇಗೆ ಗೊತ್ತಾಗಬೇಕು?
ಮಂಗಳವಾರ, ಅಕ್ಟೋಬರ್ 7, 2008
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ