ಬೇ ಏರಿಯ ದಲ್ಲಿ ಸಿಕ್ಕಾಪಟ್ಟೆ ಭಾರತದವರು ಇದ್ದ, ಹಂಗೆ ಅದ್ರಲ್ಲಿ ಸುಮಾರು ಜನ ಕನ್ನಡದವರು. ಇದ್ರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹವ್ಯಕ ಪಂಗಡದವ್ರೂ ಇದ್ನ್ಯ. ನಂಗಳದ್ದೆ ಒಂದು ಗುಂಪು ಬೇರೆ ಇದ್ದು. ಅದರಿಂದ ಸುಮಾರು ಹಬ್ಬನೆಲ್ಲ ಮಾಡ್ತ್ಯ, ಹಂಗೆ ವರ್ಷಕ್ಕೊಂದು ಬೇಸಿಗೆ ಪಿಕ್ನಿಕ್ ಬೇರೆ ಇರ್ತು. ಇವತ್ತು ಹಂಗೆ ಒಂದು ಪಿಕ್ನಿಕ್ ಇತ್ತು, ವಿಚಾರ ಎಂತಪ ಅಂದ್ರೆ, ನಾನು ಕಾರ್ಯಕ್ರಮ ನಿರ್ವಾಹಕರಲ್ಲಿ ಒಬ್ಬ ಆಗಿದಿದ್ದು :-)
ನನ್ ಮಟ್ಟಿಗೆ ಹೇಳಕ್ಕು ಅಂದ್ರೆ ಹವ್ಯಕ ಕಾರ್ಯಕ್ರಮಗಳಲ್ಲಿ ಅತಿ ಪ್ರಮುಖ ವಿಚಾರ 'ಊಟ'. ಹೌದು ಮತ್ತೆ, ಬ್ರಹ್ಮಚಾರಿ ಜೀವನದಲ್ಲಿ, ಅದೂ ನಮ್ಮೂರ ಬದಿ ಊಟಕ್ಕೆ ಸಿಕ್ಕಾಪಟ್ಟೆ ಪ್ರಾಮುಖ್ಯ. ಅದೂ ಬೇರೆ ಮೊನ್ನಿತ್ಲಗೆ ಊರಕಡೆ ಮದ್ವೆ ಮನೆ ಊಟ ನೆನ್ಸ್ಕ್ಯನ್ಡು, ಜಿಲೇಬಿ ಎಲ್ಲ ತಿನ್ದೆ (without eating, ತಿನ್ನದೇ) ಯಾವ್ ಕಾಲ ಆತು ಅನ್ಸಿತ್ತು. ನಿನ್ನೆ ಬಾಲಣ್ಣ ಫೋನಾಯಿಸಿ ಅಪ್ಪಿ ಒಂದು 5 ಪೌಂಡು ಜಿಲೇಬಿ ತಂದ್ಬಿಡು ಅಂದ್ ಕೂಡ್ಲೇ ಯಾನಮ್ನಿ ಕುಶಿ ಆತು. ಇವತ್ತು ಬೆಳ್ಬೆಳಿಗ್ಗೆ ಅಂಗ್ಡಿಗೆ ಹೋಗಿ ಐದರ ಬದಲಿಗೆ ಆರು ಪೌಂಡ್ ಜಿಲೇಬಿ ತಗಂಡ್ ಪಿಕ್ನಿಕ್ ಏರಿಯಕ್ಕೆ ಹೊಂಟಿ.
ಅಲ್ಲಿ ಹೋಗಿ ಸ್ವಲ್ಪ ಅದು ಇದು ಜೋಡ್ಸ ಹೊತ್ತಿಗೆ ಕಿರಣ ಬಂದ. ಇವತ್ತು ಜಿಲೇಬಿ ತೈನ್ದಿ ಅಂದ್ ಕೂಡ್ಲೇ ಹಂಗಿರೆ competition ಮಾಡನ ಅಂತ ಹೇಳ್ದ. ಜನ ಎಲ್ಲ ರಸಪ್ರಶ್ನೆ, ಮಕ್ಕಳ ಓಟ, ಹಿರಿಯರ ಓಟ, ಮುಗಿತಿದ್ದಂಗೆ ಊಟಕ್ಕೆ ರೆಡಿ. ಎಲ್ರ ಊಟ ಮುಗಿತಾ ಬಂದಂಗೆ ಜಿಲೇಬಿ ಖಾಲಿ. ಅಯ್ಯೋ ರಾಮ, ಒಳ್ಳೆ ಕತೆ ಆತಲ ಇದು ಹೇಳ್ಕೋತ ನಾನು ಅಲ್ಲೇ ಉಳ್ದಿದ್ದ ಜಿಲೇಬಿದು ಕೈ ಕಾಲು ತಿಂತ ಇದ್ದಿ. ಕೊನಿಗೆ ನೋಡಿರೆ ಒಂದು ಟ್ರೆಯ್ ನಲ್ಲಿ ಸುಮಾರು ಜಿಲೇಬಿ ಉಳ್ದಿತ್ತು. ಹಂಗೆ ಎಲ್ಲರಿಗೂ competition ಹೇಳಿ ಕರದ್ರೆ, 'ಜಿಲೇಬಿಈಈಇ!!! ಐದರ ಮೇಲೆ ತಿನ್ನದಾಆಆ...' ಹೇಳ್ಕ್ಯೋತ 'ನಾ ಬತ್ನಲ್ಲೇ' ಹೇಳಿದ್ವಪ. ಕೊನಿಗೂ ಕಿರಣ, ನಾಗರಾಜ (ಬೇ ಏರಿಯ ಹವ್ಯಕಕ್ಕೆ ಹೊಸ ಸೇರ್ಪಡೆ. ನಮ್ಮ ಮಲ್ಲೇಶ್ವರಂ ಹವ್ಯಕ ಹಾಸ್ಟೆಲ್ ಹುಡ್ಗ), ರುಚಿತಾ (ನಿಜ ಹೇಳಕ್ಕು ಅಂದ್ರೆ ಇವಳ ಸ್ಪೋರ್ಟಿಂಗ್ ಸ್ಪಿರಿಟ್ ಗೆ ಮೆಚ್ಚಿದಿ ನಾನು, hats off!!) ಮತ್ತೆ ನಾನು.
ಅಂತು ಇಂತೂ ನಂಗೆ ಕ್ಯಾಸನೂರು ಲಿಂಕ್ ಇರ ಕಿರಣನ್ನ ಸೋಲ್ಸಕ್ಕೆ ಆಗಲ್ಲೆ. ನಾನು ಒಂದೇಳು ಜಿಲೇಬಿ ತಿಂದಿ, ಅವ ಹತ್ತು ತಿಂದ. (ಈ ಕೌಂಟರ್ ಊಟದ ಜೊತೆಗೆ ತಿಂದಿದ್ದು ಬಿಟ್ಟು). ಒಳ್ಳೆ ಮಜಾ ಬಂದಿದ್ದು ಹೌದು ಮಾತ್ರ.. ಊಟೆಲ್ಲಾ ಆದ ಮೇಲೆ ಸ್ವಲ್ಪ ಹೊತ್ತು ವಾಲಿಬಾಲ್ ಆಡಿ ಜಿಲೇಬಿ ಎಲ್ಲ ಕರ್ಗ್ಸಿ ಮನೆ ಕಡಿಗೆ ಹೊಂಟಿ.
ಅಯ್ಯೋ... ಹೇಳಕ್ಕೆ ಮರ್ತು ಹೋಗಿತ್ತು :-) ಬೆಳಿಗ್ಗೆ ಪಾರ್ಕಿಗೆ ಪಿಕ್ನಿಕ್ ಗೆ ಹೇಳಿ ಹೋದ್ರೆ, ನಂ ಬಾಲಣ್ಣನ ಮಕ್ಳು ಚೊಲೋ ಮಾಡಿ "ಹುಲಾ ಹೂಪ್ಸ್" ಮಾಡ್ತಾ ಇದ್ದಿದ್ದ. ಸ್ವಲ್ಪ ಹೊತ್ತು ನೋಡಿದಿ ಚೆನಾಗನ್ಸ್ಚು, ನನ್ಗಕ್ಕೆಲ್ಲ ಅಲ್ಲ.. ಬರಿ ಹುಡ್ಗ್ರಿಗೆ ಅದು ಹೇಳಿ ಸುಮ್ನಾಗಿದ್ದಿದ್ದಿ. ಹಂಗೆ ಜನ ಬಂದ, ಅವ್ರ ಜೊತಿಗೆ ಸುಮಾರು ಸಣ್ಸಣ್ ಹುಡಗರು ಬಂದ.. ಅವರೆಲ್ಲ ಎಲ್ಲೊ ಹುಟ್ತಾನೆ ಕಲ್ತಿದ್ವೇನ ಅನ್ನೋ ತರ ಆರಾಮಾಗಿ ಹುಲಾ ಹೂಪ್ ಮಾಡ್ತಾ ಇದ್ದಿದ್ದ.. ನಂಗೆ ತಡಿಯಕ್ಕೆ ಆಗಲ್ಲೆ.. ನಾನು ಮಾಡದೆ ಸೈ ಹಂಗಿದ್ರೆ ಇವತ್ತಿಗೆ ಹೇಳಿ ನಿರ್ದಾರ ಮಾಡಿದ್ದಲ. ಹೋಗಿ ನೋಡಿರೆ ಮೊದ್ಮೊದ್ಲು ಒಂದು ಅಥ್ವಾ ಎಲ್ಡು ಸಲ ತಿರ್ಗ್ತಿದ್ದಂಗೆ ಬಿದ್ದೊಗ್ತಿತ್ತು. ಆದ್ರೂ ಹಠ ಬಿಡ್ದೆ ಸುಮಾರು ಹೊತ್ತು ಕಲ್ತಿ. ಸುಮಾರು ಸಣ್ಣ ಹುಡಗರು ನಂಗೆ ಹೇಳ್ಕೊಟ್ಟ. ಸುಳ್ಳಲ್ಲ.. ಸಣ್ಣಕ್ಕಿದ್ದಾಗ ಮೈ ಕುಣ್ಸಿದ ಹಂಗೆ ದೊಡ್ದಕಾದ್ ಮೇಲೆ ಕಷ್ಟ. ಎಂತಾರು ಆಗ್ಲಿ, ಈ ಪಿಕ್ನಿಕ್ ಹೇಳೆಲಿ ಹುಲಾ ಹೂಪ್ಸ್ ಒಂದು ಕಲ್ತಿ ಹೇಳಿ ಆತು. ಕೊನಿಗೆ ಹೆಚ್ಚು ಕಡಮೆ ಎರಡರಿಂದ ಮೂರು ನಿಮಿಷ ಹುಲಾ ಹೂಪ್ಸ್ ರಿಂಗ್ ನ ಬಿಳ್ಸ್ದೆ ಮೈ ಕುಣ್ಸದು ಕಲ್ತಿ.
ಸುಮಕ್ಕಂಗೆ ಒಂದು ದನ್ಯವಾದ. ಫೋಟೋ ತೆಗೆದಿದ್ದಕ್ಕೆ.
ರಾಜೇಶಣ್ಣ ತೆಗ್ದ ಸುಮಾರು ಫೋಟೋಗಳು ಇಲ್ಲಿದ್ದು.. ಪುರ್ಸ್ಹೊತ್ತಿದ್ದಾಗ ನೋಡಿ
ಸುಮಕ್ಕ ತೆಗೆದ ಸ್ವಲ್ಪ ಫೋಟೋಗಳು ಇಲ್ಲಿ..
ಸೋಮವಾರ, ಜೂನ್ 22, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
8 ಕಾಮೆಂಟ್ಗಳು:
ಚೊಲೊ ಬರದ್ದೆ. ಇಷ್ಟ ಆತು ಹವ್ಯಕ ಭಾಷೆಯಲ್ಲೆ ಬರ್ದಿದ್ದು.
ಭರ್ತಿ ಚನಾಗಿ ಬರದ್ಯೋ... ನಮ್ಮ ಭಾಷೆಯಲ್ಲಿ ಬರ್ದಿದ್ದು ಓದಿ ತುಂಬಾ ಕುಶಿ ಆತು... ಹಿಂಗೆ ಬರಿತಾ ಇರು..
odhokke maja banthu :) keep writing in kannada...
ಚೆನಾಗಿದ್ದು!
ಎಂತು ೧೦ ಜಿಲೇಬಿ??
ರುಚಿ ನೋಡಕ್ ಸಾಕಾಗ್ಗು!
:-)
Good to read in Havyaka after a long time. Nice write up. I too cherished some memories of havyaka picnic while reading it. I appreciate the spirit of you learning any new skill right away if you like that.
Keep the spirit on. All the best
Alpazna neenu heliddu sari hotu 10 jilabi yelligu sala :)
@ALPAZNA
ಪಾಪ ಹೆದ್ರಸಡ ಮಾರಾಯ... ನಾನು ಬರೇ ಹತ್ತು ಜಿಲೇಬಿನ ಕೇಳಕ್ಕು ಮಾಡ್ಕ್ಯಂಡವ ಕೇಳಲ್ಲೆ ಹೆದ್ರಿ ಹೋಗ್ಗೂ ಅಂತ!
ನಮ್ಮೂರು ಕಡಿಗೆ ಬರೇ ಒಂದು ಹತ್ತು ಹನ್ನೆರೆಡು ಜಿಲೇಬಿ ತಿನ್ನವರನ್ನ ಕಂಬಳಕ್ಕೆ ಕೂರಿಸ್ಕ್ಯಂಡ್ರೆ ಎಲ್ಲರೂ ಬೈತ ಎಂಗಕ್ಕೆ ಜಿಲೇಬಿ ತಿಂದಂಗೆ ಆಗಲ್ಲೆ ಅಂತ.. ಜಿಲೇಬಿಗೆ ಒಂದು ಸುತ್ತು ಜಾಸ್ತಿ ಇದಿದ್ರು ಅಡ್ಡಿಲ್ಲೆ ಇವ ಬಂದು ಕೂತಿದ್ದ ಒಂದು ಸುತ್ತು ಕಡ್ಮೆ ಆಯ್ದು ಕಾಣ್ತು ಅಂತ ಮನಸ್ಸಗಾದ್ರೂ ಬೈಯದೆ ಅಲ್ದನಾ ;)
ಈಗ ಮದ್ವೆ ಮನೆಗೆ ಹೊದ್ರೆ ಸುಮ್ಮನೆ ಎಲ್ಲರೂ ಕೈ ಅಡ್ಡ ಹಿಡಿದ್ದ ಅಂತ ಚೂರು ವಾರೆಯಾಗಿ ಹಿಡ್ಕಂಡ್ರೂ ಸ್ವೀಟ್ಸ್ ಹಾಕ್ತ್ವೇ ಇಲ್ಯೋ.. ಎಂಗಕ್ಕೆ ನಡಹಳ್ಳಿ ಕಡೆ ಆತೂ ಹಾಕಿ ಹೇಳಕ್ಕು... ಮಾರಾಯಾ.. ಮದ್ವೆ ಮನೆಗಳ ಕಡೆ ಸ್ವೀಟ್ಸಿಗೂ ರಿಸೆಶ್ಶನ್ ಶುರು ಆಯ್ದ ಮಾರಾಯ!!!
ಹುಲಾ ಹೂಪ್ಸ್! ಹಂಗೆ ಹವ್ಯಕ್ರೆಲ್ಲ ಸೇರಿ ಒಂದು ಸರ್ಕಸ್ ಕಂಪನಿ ಶುರು ಮಾಡ್ತ್ರೋ ಎಂತು?
ಕಾಮೆಂಟ್ ಪೋಸ್ಟ್ ಮಾಡಿ