ನಿಜ ಹೇಳಕ್ಕು ಅಂದ್ರೆ ಆನು ಸಣ್ಣಕ್ಕಿರಕ್ಕಿರೆ ಮಜಾ ಇತ್ತು, ಯಾರ್ ಮನೆದಾದ್ರು ತೋಟಕ್ಕೆ ಹೋಗಿ ಪ್ಯಾರ್ಲೆ ಕಾಯಿ ಕೊಯ್ಕಂಡು ತಿಂದು, ಅವ್ರತ್ರ ಬಯ್ಸ್ಕಂಡು ಎಂತೂ ಬೇಜಾರಿಲ್ದೆ ಮನಿಗೆ ಹೊಗ್ತಿದ್ಯ. ಬರಿ ತೋಟದ್ದ ಪ್ಯಾರ್ಲೆಕಾಯಿ ಒಂದೆ ಅಲ್ಲ.. ವಾಟ್ಪ್ಯಾರ್ಲೆ ಹಣ್ಣು, ಮುಳ್ಳಣ್ಣು, ರಂಜ್ಲೆ, ಸಂಪ್ಗೆ, ಮಾವಿನ್ಹಣ್ಣು, ಗೇರ್ಹಣ್ಣು, ಚೊಳ್ಳೆಹಣ್ಣು, ಹೊಳೆದಾಸ್ವಾಳ, ಕೌಳಿಕಾಯಿ, ನೇರ್ಲೆಹಣ್ಣು, ಮುರ್ನ್ಹುಳಿ, ಹಲ್ಸು... ಹೇಳ್ತಾ ಹೊದ್ರೆ ಯೆಲ್ಲಾ ಥರ ಹಣ್ಣು ನೆನ್ಪಾಗ್ತ. ಇಷ್ಟೆ ಅಲ್ಲ.. ಬಾಳೆಹಣ್ಣು, ನೆಲ್ಲಿಕಾಯಿ, ಕಬ್ಬು, ಕಾಕ್ಪಟ್ಲೆ, ಅನಾನಸ್, ಪಪಾಯ.. ಒಂದಾ ಯೆಲ್ಡಾ.. ಸಿಕ್ಸಿಕ್ಕಿದ್ ಮರ ಹತ್ತಿದ್ದು, ಸಿಕ್ಸಿಕ್ಕಿದ್ ಹಣ್ಣು ತಿಂದಿದ್ದು. ಹಣ್ಣು ಸಕಾಗಲ್ಲೆ ಹೇಳಿ ಹೂವಲ್ಲ ತಿಂದಿದ್ಯ ಯೆಂಗ, ಕಮಲದ ಹೂ ಬುಡ ಒಳ್ಳೆ ರವೆರವೆ ತರ ರುಚಿ ಇರ್ತು. ಬೆಳಿದಾಸ್ವಾಳದ್ದು ಕಷಾಯ ಒಳ್ಳೆ ರುಚಿ. ಹಣ್ಣು ಹೂವಿಗೆ ನಿಲ್ಸ್ದೆ, ಹಣ್ಣಿನ ಬೀಜ, ಬಳ್ಳಿ, ಎಲೆ, ಸೊಪ್ಪು, ಬೇರು, ಅದು ಇದು ಹೇಳಿ ಎಂತಾತ ಅದು ತಿಂದಿದ್ದು ನೆನ್ಪಿದ್ದು ಯೆಂಗೆ. ಆಸ್ರಾದ್ರೆ ನೀರು ಕುಡಿಯದು ಅಬ್ಯಾಸ, ಬಾವಿ ನೀರು, ಬೋರ್ವೆಲ್ ನೀರು, ಹೊಳೆ ನೀರು, ಕೆರೆ ನೀರು.. ಅಬ್ಬಿ ನೀರು.. ಹೇಳ್ಕ್ಯೊತ ಹೊದ್ರೆ ಸುಖಿಲ್ಲೆ. ತೀರ ಹೆಚ್ಚ್ಗೆ ಅಲ್ಲ.. ಬರಿ ೧೦-೧೫ ವರ್ಷ ಹಿಂದಪ, ಈಗೆಲ್ಲ ಯೆನ್ ಪಕ್ಕ ಇರ ಜನಕ್ಕೆ ಮಿನಿರಲ್ ವಾಟರ್ರೆ ಆಗಕ್ಕು, ಯೆಂಗೆ ಹೆಂಗಾತ ಹಂಗೆ, ಸುಮ್ಕೆ ಕುಡಿಯಕ್ಕೆ ನೀರು ಕೊಡ್ರಪ್ಪ ಹೇಳಿರು ಜನ, "ಬೇಡ ಕಣೊ, ಇಲ್ಲಿ risk ತಗೋ ಬೇಡ, ಯಾಕೆ ಸುಮ್ನೆ" ಅಂತ ಹೇಳಿ ಮಿನಿರಲ್ ವಾಟರ್ ಕುಡ್ಸ್ತ..
ಇಷ್ಟೆಲ್ಲ ಎಂತಕ್ಕೆ ಹೇಳಿದಿ ಅಂದ್ರೆ, ಆನು beer ಕುಡಿತಿ, (ತೀರಾ ಅಲ್ಲ.. ಆದ್ರು ಅವಾಗಿವಾಗ), ಅದು ವಿಜ್ಙಾನದ ಪ್ರಕಾರನೆ ಕೆಟ್ಟದ್ದು, ಆದ್ರು ಜನ ಎಂತು ಹೇಳದಿಲ್ಲೆ.. ಸೀದಾಸಾದ ನಲ್ಲಿ ನೀರು ಕುಡಿಯಕ್ಕೆ ಬ್ಯಾಡ ಹೇಳ್ತ.. ಬೇಜಾರಾಗ್ತು.. ಅಲ್ಲ.. ಭೂಮಿಯ ಮೇಲೆ ಇರೋದ್ರಲ್ಲೆಲ್ಲ ಸ್ಪೆಷಲ್ ಅಂದ್ರೆ ನೀರು ಹೇಳಿ ಸುಮಾರು ಜನ ಹೇಳ್ತ, ಅಂತದ್ರಲ್ಲಿ, ನಂಗ ನೀರನ್ನ ಕಣ್ಣು ಮುಚ್ಚಿ ಕುಡಿಯ ಹಂಗಿಲ್ಲೆ ಅಂದ್ರೆ ಬಾಳ ಬೇಜಾರಾಗ್ತು.. ಅವ್ರು ಹೇಳದೂ ಸುಳ್ಳಲ್ಲ.. ಇತ್ತಿತ್ಲಗೆ ಹ್ಯಂಗಾತ ಹಂಗೆ ನೀರು ಕುಡ್ದ್ರೆ ಜ್ವರ ಬರದೂ ನಿಜ.. ಹತ್ವರ್ಷ ಹಿಂದೆ ಸರಿ ಇದ್ದಿದ್ದು ನೀರು ಈಗ ಸರಿ ಇಲ್ಲೆ ಅಂದ್ರೆ ಯಾರು ಕಾರಣ ಅಂತ ಯೋಚ್ನೆ ಮಾಡಕ್ಕಾಗ್ತು.
ಎಂಗೆ ಸುಮಾರು ಜನ beer/alcohol ಕುಡಿಯಡ ಹೇಳಿ ಒತ್ತಾಯ ಮಾಡ್ತಾ ಇರ್ತ, ಇವತ್ತು ಕೈಲಿರ KF ಬಾಟ್ಲಿ ಮೇಲೆ ಪ್ರಮಾಣ ಮಾಡಿ ಹೇಳ್ತಾ ಇದ್ದೆ, ಯಾವತ್ತಿಗೆ ನಾನು, ಯಾವ್ ನಲ್ಲಿಲಾರು ಬರ ನೀರು ಕುಡಿಯ ಹಂಗಾಗ್ತ, ಯಾವ್ ಹೊಳೆ ನೀರು ಕುಡಿಯ ಹಂಗಿರ್ತ, ಯಾವ್ ನದಿ ನೀರಾರು ಖುಷಿಲಿ ಕುಡಿಲಕ್ಕ, ಅವತ್ತಿಂದ beer/alcohol ಮುಟ್ಟದಿಲ್ಲೆ...
ಭಾನುವಾರ, ಆಗಸ್ಟ್ 10, 2008
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
4 ಕಾಮೆಂಟ್ಗಳು:
ಸರಿ ಹೋತು ಬಿಡ ತಮ.. ನಿಂಗ್ ಇನ್ ಬುದ್ಧಿ ಹೇಳಿರೆ ಯಂಗ್ ಮಳ್ಳ ಹೇಳ್ತ.
ನೀರು ಬೀರು ಹೀರು.. ನಿನ್ನ ಕೇಳೋರ್ಯಾರು?
ಅಮರ್ ನೀನು ಹೇಳದು ನಿಜನೆಯ , ಜನ ಹಂಗೆ ಆಗಿ ಹೊಯ್ದ . ಲೋ ಎಣ್ಣೆ ಬಿಡೋ ವಿಚಾರ ಎಲ್ಲ ಎಂತಕ್ಕೆ ಆರಾಮಾಗಿ ಮಿತವಾಗಿ ಕುಡ್ಕಂದು ಇರಕ್ಕು ಆರಾಮಾಗಿ ಇರ್ತು ಜೀವನ. ಲೋಕಕೆಲ್ಲ ಒಂದು ಭ್ರಮೆ, ಪರಯಪ್ತವಾಗಿ ಎನನ್ನು ನೋಡಲು ಇಷ್ಟ ಪದದಿಲ್ಲೇ. ಲೋಕಕೆಲ್ಲ ಕೆಟ್ಟದು ಮಾತ್ರ ಕಾಣದು ಅದಕ್ಕೆ ನಾವು "ಎವೊಲ್ವೆ" ಆಗ್ತಾ ಇಲ್ಲೇ ಅಂತ ಎಸ್ಟೋ ವಿಜ್ಞಾನಿಗಳು ಹೇಳ್ತಾ ಇರ್ತ
ಹವ್ಯಕ ಬಾಷೇಲಿ ಇರ ಬರಹ ನೋಡಿ ಕುಷಿ ಆತು... ಮುಳ್ಳಣ್ಣು ವಾಟ್ ಪ್ಯರಲೇ, ರಂಜ್ಲೆ, ಸಂಪ್ಗೆ, ಮಾವಿನ್ಹಣ್ಣು, ಗೇರ್ಹಣ್ಣು, ಚೊಳ್ಳೆಹಣ್ಣು, ಹೊಳೆದಾಸ್ವಾಳ, ಕೌಳಿಕಾಯಿ, ನೇರ್ಲೆಹಣ್ಣು, ಮುರ್ನ್ಹುಳಿ, ಹಲ್ಸು... ಲಿಸ್ಟ್ ಲಿ ಇರ ಎಲ್ಲ ಹಣ್ಣಿನ ಹೆಸರು ಕೇಳಿ ಬಾಯಲ್ಲಿ ನೀರೂರ್ತಾ ಇದ್ದು...... ನಮ್ಮೂರಲ್ಲಿ ಈಗಲೂ ಎಲ್ಲ ಹಣ್ಣು ಸಿಕ್ತು... ಆದ್ರೆ ಈಗಿನ ಹುಡುಗರಿಗೆ ಕೊಟ್ರೆ ತಿನ್ತ್ವಲ್ಲೇ.. ಹಣ್ಣಿನ ಕಲರ್ ನೋಡಿನೇ ಬ್ಯಾಡ ಹೇಳ್ತಾ ಈಗಿನ ಹುಡ್ರು, ಬಾಳೆ ಹಣ್ಣಿನ ಸಿಪ್ಪೆ ಸ್ವಲ್ಪ ಕಪ್ಪಾದ್ರೂ ಎಂಗೆ ಬ್ಯಾಡ ಹೇಳ್ತಾ! ಏನಿದ್ರು ಡ್ರೈ ಫ್ರೂಟ್ಸ್ ಕೊಟ್ರೆ ತಿಂತ! ಒಟ್ಟು ನೋಡಕ್ ಚನಾಗಿರಕ್ಕು ರುಚಿ ಇರ್ಲಿ ಇಲ್ದೆ ಹೋಗ್ಲಿ !!
ಹಳ್ಳಿ ಪ್ರದೇಶದಲ್ಲಿ ಕೆರೆ ನದಿ ಹಳ್ಳದಲ್ಲಿ ಹರಿತಾ ಇರ ನೀರು ಈಗಲೂ ಶುದ್ದವಾಗೆ ಇದ್ದು, ಕುಡದ್ರೆ ಎಂತು ಅಗ್ತಲ್ಲೇ ಆದ್ರೆ ನಗರ ಪ್ರದೇಶದಲ್ಲಿ ಸಿಕ್ಕ ಸಿಕ್ಕ ಕಡೆ ನೀರು ಕುಡದ್ರೆ ಏನಾರು ರೋಗ ಬತ್ತು! ಅದಕ್ಕೆ ನಗರವಾಸಿಗಳು "ನೀರು ಬಿಡಿ ಬೀರು ಕುಡಿ" ಆಂದೋಲನ ಆರಂಭ ಮಾಡಲಿ !
ಕಾಮೆಂಟ್ ಪೋಸ್ಟ್ ಮಾಡಿ